ಕಾನೂನಿಗೂ ಸಾಹಿತ್ಯ ವಿಮರ್ಶೆಗೂ ಎತ್ತಣೆತ್ತಣ  ಸಂಬಂಧವಯ್ಯಾ ಎಂದು ವಿಸ್ಮಯವಾಗಿದ್ದು ನಿಜ,ಅದು ಡಾ. ಸಿ.ಎನ್ ರಾಮಚಂದ್ರನ್ ಅವರು ತಾವು ಬರೆದ ''ಮಹಿಳೆ ಮತ್ತು ಭಾರತೀಯ ಕಾನೂನುಗಳು'' ಎಂಬ ಪುಸ್ತಿಕೆಯ ಕರಡು ಪ್ರತಿಯನ್ನು ಪರಿಶೀಲಿಸುವ ಸಲುವಾಗಿ ನನಗೆ ಕಳಿಸಿದಾಗ,ನಂತರ ಅವರಿಗೆ ಕಾನೂನಿನಗೆ ಡಿಗ್ರಿಯೂಇರುವುದು ತಿಳಿಯುತು. ಪುಸ್ತಿಕೆ ಓದಿದಾಗ ಅವರಿಗೆ ಭಾರತೀಯ ಮಹಿಳೆಯರ ಸ್ಥಿತಿ-ಗತಿಯ ಬಗ್ಗೆ ಇರುವ ಕಾಳಜಿ,ಕಳಕಳಿಯ ಪಚಯವೂ ಆಹಿತು.

ಭಾರತೀಯ ಮಹಿಳೆಯರ ಸ್ಥಿತಿ-ಗತಿ ಸುಧಾರಿಸಲು ಅವರಿಗೂ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಲು ಹೊಸ ಕಾನೂನುಗಳನ್ನು ಮಾಡಲಾಗಿದೆ. ಹಳೆಯ ಕಾನೂನುಗಳಿಗೆ ತಿದ್ದುಪಡಿ ಮಾಡಲಾಗಿದೆ, ಆದರೆ. ಈ ಕಾನೂನುಗಳ ಸಮರ್ಪಕ ಅನುಷ್ಠಾನ ಇನ್ನೂ ಸಾಧ್ಯವಾಗಿಲ್ಲ.ಮುಖ್ಯವಾಗಿ ಮಹಿಳೆಯರಿಗೆ ಅವುಗಳ ಬಗ್ಗೆ ಅರಿವಿಲ್ಲ. ಅರಿವಿದ್ದರೂ ಅದನ್ನು ಒಪ್ಪಲು ಸಿದ್ಧವಿಲ್ಲದ ಸಮಾಜದ ಮನಸ್ಥಿತಿಯಿಂದಾಗಿ ಮಹಿಳೆಯರಿಗೆ ಅವುಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ,ಹಾಗಾಗಿ. ಅರಿವು  ಮೂಡಿಸುವ ಇಂತಹ ಪುಸ್ತಿಕೆಗಳ ಅವಶ್ಯಕತೆ ಇದ್ದೇ ಇದೆ, ಲೇಖಕರ ಉದ್ಧೇಶ ಸಫಲವಾಗಿದೆ,

                                                                                                                                                          -ಹೇಮಲತಾ ಮಹಿಷಿ (ಪ್ರಸಿದ್ಧಿ ನ್ಯಾಯವಾದಿ ಮತ್ತು ಲೇಖಕಿ)    

 

ಸಿ.ಎನ್. ರಾಮಚಂದ್ರನ್

16 other products in the same category:

Product added to compare.