ನನ್ನ ಪಾಲಿಗೆ `ನೂರೆಂಟು ಮಾತು' ಕೇವಲ ಅಂಕಣ ಬರಹಗಳಲ್ಲ. ವಾರಕ್ಕೊಮ್ಮೆ ಬರೆದು ನಿವಾಳಿಸಿಬಿಡುವ ಕ್ರಿಯೆಯೂ ಅಲ್ಲ. ನನ್ನ ಚಾಕರಿಯ ಒಂದು ಭಾಗವೂ ಅಲ್ಲ. ಅದು ನನ್ನನ್ನು ರೂಪಿಸುವ ಸಂಗಾತಿ. ನನ್ನ ಕೈಹಿಡಿದು ನಡೆಸಿದ ಜೊತೆಗಾತಿ. ನನ್ನೊಳಗಿನ ಆಪ್ತ ಸ್ನೇಹಿತೆ. ನನ್ನ ಓದು, ಅಧ್ಯಯನ, ಪ್ರವಾಸ, ಹರಟೆ, ಸಂದರ್ಶನ ಚಿಂತನೆ, ಯೋಚನೆ, ಮಾತುಕತೆ, ಕಲ್ಪನೆಗಳ ಅಕ್ಷರರೂಪಿ. ನಾನೇ ಅವನ್ನೆಲ್ಲ ವಾರವಾರ ನಿಮ್ಮ ಮುಂದೆ ಇಟ್ಟ ಮೊದಲ ಆರೋಪಿ! - ಎನ್ನುವ ವಿಶ್ವೇಶ್ವರ ಭಟ್ಟರ ಜನಪ್ರಿಯ `ನೂರೆಂಟು ಮಾತು' ಅಂಕಣ ಬರಹಗಳ ಸಂಕಲನ.

ವಿಶ್ವೇಶ್ವರ ಭಟ್

16 other products in the same category:

Product added to compare.