"ಬಿಆರೆಲ್ ಒಳ್ಳೆಯ ಕಸಬುಗಾರ ಕವಿಯಾದುದರಿಂದ ಅವರ ಕಾವ್ಯದಲ್ಲಿ ಕಲೆಗಾರಿಕೆಗೆ ಯಾವತ್ತೂ ಲೋಪ ಬರಲಾರದು. ಉಸಿರಿಗೆ ತಕ್ಕ ಏರಿಳಿತವುಳ್ಳ ಅಕೃತ್ರಿಮ ಲಯ, ಕ್ಲೀಷೆಗೆ ನಾಚುವ ಭಾಷೆಯ ಗರಿಮುರಿ ಬಳಕೆ, ಒಟ್ಟಾರೆ ಕಾವ್ಯಶಿಲ್ಪದ ಬಗ್ಗೆ ರಾಜಿಯಾಗದ ಕಾಳಜಿ, ಹೊಚ್ಚ ಹೊಸ ರೂಪಕಗಳನ್ನು ಓದುಗರು ಬೆರಗಾಗುವಂತೆ ಕಾಣುವ ಕಾಣಿಸುವ ಪರಿಣತಿ ಮತ್ತು ಪ್ರತಿಭೆ, ತನ್ನದೇ ಸ್ವಯಾರ್ಜಿತ ಜೀವನ ನೋಟ-ಇವೆಲ್ಲವೂ ಬಿಆರೆಲ್ ಅವರಿಗೆ ಉಂಟು" ಎಂದಿದ್ದಾರೆ ಖ್ಯಾತ ಕವಿ ಎಚ್.ಎಸ್. ವೆಂಕಟೇಶಮೂರ್ತಿಯವರು. `ಹಿನ್ನೋಟದ ಕನ್ನಡಿ' ಎಚ್.ಎಸ್. ವೆಂಕಟೇಶಮೂರ್ತಿ ಅವರು ಸಂಪಾದಿಸಿರುವ ಲಕ್ಷ್ಮಣರಾವ್ ಅವರ ಆಯ್ದ ಎಪ್ಪತ್ತು ಕವನಗಳ ಸಂಕಲನ, ಪ್ರವೇಶಿಕೆಗಳೊಂದಿಗೆ.

ಸಂ: ಎಚ್.ಎಸ್. ವೆಂಕಟೇಶಮೂರ್ತಿ

16 other products in the same category:

Product added to compare.