'ಒಡನಾಟದ ನೆನಪುಗಳು' ಪುಸ್ತಕದ ಸಂಪಾದಕರಾದ ಡಾ. ಸಿ ಎನ್ ರಾಮಚಂದ್ರನ್ ರವರು ಪುಸ್ತಕ ಕುರಿತು ಹೀಗೆ ಹೇಳಿದ್ದಾರೆ. 

        " ಹೆಸರಾಂತ ಕನ್ನಡ ಪ್ರಾಧ್ಯಾಪಕ, ಖ್ಯಾತ ತುಳು ಜಾನಪದ ವಿದ್ವಾಂಸ, ಶೈಕ್ಷಣಿಕ ಸಂಸ್ಥೆಗಳ ಸ್ಥಾಪಕ ಹಾಗೂ ವಿಶ್ವವಿದ್ಯಾನಿಲಯಗಳ ಸಮರ್ಥ ಆಡಳಿತಗಾರ, ಜರ್ಮನಿಯಲ್ಲಿ ಕನ್ನಡ ಕಲಿಸುವ ಕನ್ನಡ ಪಂಡಿತ, ಡಾ, ಬಿ ಎ ವಿವೇಕ ರೈ ಕಳೆದ ಐದು ದಶಕಗಳಿಂದ ಸಾಹಿತ್ಯಕ್ಷೇತ್ರದಲ್ಲಿಯೂ ಗಂಭೀರವಾಗಿ ತಮ್ಮನ್ನು ತೊಡಗಿಸಿಕೊಂಡು ಇಲ್ಲಿಯವರೆಗೆ ಕನ್ನಡದಲ್ಲಿ(ಅನುವಾದಗಳೂ ಸೇರಿದಂತೆ) 24 ವಿಮರ್ಶನ ಕೃತಿಗಳು, 18 ಸಂಪಾದಿತ ಗ್ರಂಥಗಳು,ಏಳು ಇಂಗ್ಲೀಷ್ ಗ್ರಂಥಗಳು ಎರಡು ತುಳು ಕೃತಿಗಳು ಒಟ್ಟು 51 ಕೃತಿಗಳನ್ನು ರಚಿಸಿದ್ದಾರೆ. ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದರೂ ಇಂದಿಗೂ ಸರಳ, ಸಜ್ಜನ, ಸ್ನೇಹಪರ ವ್ಯಕ್ತಿಯಾಗಿಯೇ ಇರುವ ವಿವೇಕ ರೈ ಡಿಸೆಂಬರ್ ಎಂಟರಂದು 75 ಸಾರ್ಥಕ ವರ್ಷಗಳನ್ನು ಪೂರೈಸಿ 76ನೆಯ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ, ಅವರ ನೂರಾರು ಶಿಷ್ಯರು, ಸಹೋದ್ಯೋಗಿಗಳು ಹಾಗೂ ಸ್ನೇಹಿತರ ಪರವಾಗಿ, ಸಾಂಕೇತಿಕವಾಗಿ, ಒಡನಾಟ ಪುಸ್ತಿಕೆಯ ಮೂಲಕ ಅವರನ್ನು ಅಭಿನಂದಿಸಲು ನಮಗೆಲ್ಲರಿಗೂ ಅಪಾರ ಸಂತಸವಾಗುತ್ತಿದೆ."

ಸಂ:ಸಿ ಎನ್ ರಾಮಚಂದ್ರನ್

16 other products in the same category:

Product added to compare.