"ಭಾಸನ ನಾಟಕಗಳು ಕೇವಲ ಓದು ನಾಟಕಗಳಲ್ಲ. ರಂಗಕ್ಕೂ ಸುಲಭವಾಗಿ ಅಳವಡುತ್ತವೆ. ಕನ್ನಡ ರಂಗಭೂಮಿಯ ಮೇಲೆ ಸುಲಭವಾಗಿ ಅಭಿನಯಿಸಲು ಅನುಕೂಲವಾಗುವಂತೆ ನಾಟಕಗಳನ್ನು ಅನುವಾದಿಸಿದ್ದಾರೆ ಸೀತಾಳಭಾವಿಯವರು. ಜೊತೆಗೆ ಸಂಸ್ಕೃತದ ಜಾಯಮಾನಕ್ಕೆ ಹೊಂದುವ ಆದರೆ ಕನ್ನಡಕ್ಕೆ ಈಗ ಅಷ್ಟಾಗಿ ಹೊಂದದ `ಶ್ಲೋಕ'ಗಳನ್ನು ಗದ್ಯಕ್ಕೆ ಅಳವಡಿಸಿ ಆಧುನಿಕ ರಂಗಭೂಮಿಗೆ ಹೊಂದುವಂತೆ ಬದಲಾಯಿಸಿಕೊಂಡಿದ್ದಾರೆ. ಇದು ಈ ಐದು ನಾಟಕಗಳ ವೈಶಿಷ್ಟ್ಯತೆಯೂ ಹೌದು. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ರಚಿತವಾಗಿರುವ ಈ ನಾಟಕಗಳು ಇಂದಿಗೂ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವುದು ಭಾಸನ ನಾಟಕಗಳ ಅಗ್ಗಳಿಕೆ.''

ಅನು:ಮಹಾಬಲ ಸೀತಾಳಭಾವಿ

16 other products in the same category:

Product added to compare.