ಸಂ:ದೊಡ್ಡಹುಲ್ಲೂರು ರುಕ್ಕೋಜಿ / Doddahulluru Rukkoji
ಬೈಂಡಿಂಗ್ : ಪೇಪರ್ ಬ್ಯಾಕ್
ISBN :81-88974-18-8
ಪುಸ್ತಕದ ಸಂಖ್ಯೆ : 138
Reference: ಸತೀಶ್ ಚಪ್ಪರಿಕೆ
ಸತೀಶ್ ಚಪ್ಪರಿಕೆ / Sathish Chapparike
ಬೈಂಡಿಂಗ್ : ಹಾರ್ಡ್ ಬೌಂಡ್
ಪುಟಗಳು :424
ISBN : 978-93-92230-65-3
ಪುಸ್ತಕದ ಸಂಖ್ಯೆ : 881
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
'ಘಾಂದ್ರುಕ್' ನಮ್ಮಲ್ಲಿ ತೀವ್ರ ಆಸಕ್ತಿ ಹುಟ್ಟಿಸುವುದು ಅದರ ಭೌಗೋಳಿಕ ವಿಸ್ತಾರ ಮತ್ತು ಮಾನವೀಯ ಸಂಬಂಧಗಳ ಆಕರ್ಷಣೆಯಿಂದಾಗಿ. ನಮ್ಮ ದಕ್ಷಿಣ ಕನ್ನಡದಿಂದ ಹಿಡಿದು ಹಿಮಾಲಯದ ತಪ್ಪಲು,ನೇಪಾಳ ಅಲ್ಲಿನ ಘಾಂದ್ರುಕ್' ಎಂಬ ಹಳ್ಳಿ, ಅನ್ನಪೂರ್ಣ ಶಿಖರ, ಗಂಡಕಿ ನದಿ-ಹೀಗೆ ಪ್ರಕೃತಿ,ಸೃಷ್ಟಿ ಮತ್ತು ಮಾನವ ಬದುಕಿನ ಗತ,ಲಯಗಳು ಒಂದರೊಳಗೊಂದು ಬೆಸೆದುಕೊಂಡು ಅನಾವರಣಗೊಳ್ಳುವ ಈ ಕಾದಂಬರಿಯ ಕಥನದಲ್ಲಿ ಒಂದಕ್ಕಿಂತ ಹೆಚ್ಚು ಆಯಾಮಗಳಿವೆ.ಈ ಕಾದಂಬರಿಯ ಮೂಲ ಮೌಲ್ಯಗಳು, ಚಿಂತನೆ ಇರುವುದು ನೇಪಾಳವೂ ಸೇರಿದಂತೆ, ಭಾರತೀಯ ಸಂಸ್ಕೃತಿಯಲ್ಲೇ. ಇದಕ್ಕೆ ಆಧುನಿಕ ಯುಗದಲ್ಲಿ ಮೂಡಿರುವ ಆಯಾಮಗಳು ಈ ಬದುಕನ್ನು ಹೆಚ್ಚು ಸಂಕೀರ್ಣಗೊಳಿಸಿವೆ. ಚಿಂತನೆಯಲ್ಲಿ ಸ್ವಲ್ಪ ಗೊಂದಲ ಆರಾಜಕತೆಗಳಿಗೆಡೆ ಮಾಡಿಕೊಟ್ಟಿವೆ. ಹೊಸ ಆಯಾಮಗಳನ್ನೊಳಗೊಂಡ ವರ್ತಮಾನದ ಆಧುನಿಕ ಬದುಕಿನ ಶೋಧವೇ ಕಾದಂಬರಿಯ ಧ್ಯೇಯ ಉದ್ದೇಶಗಳು ಎಂದೇ ಇದನ್ನು ನವ್ಯೋತ್ತರ 'ನವ್ಯ' ಕಾದಂಬರಿ ಎಂದು ಕರೆಯಬಹುದೇನೋ.
ವ್ಯಕ್ತಿಗತ ನೆಲೆಯಿಂದ ಸಾರ್ವತ್ರಿಕ ನೆಲೆಗೆ ಚಾಚಿಕೊಳ್ಳುವ ಈ ಕಾದಂಬರಿಯಲ್ಲಿ ಮುಖ್ಯವಾಗಿ ಈ ಕೆಲವು ಆಯಾಮಗಳನ್ನು ಗುರುತಿಸಬಹುದು. ವರ್ತಮಾನ ಕಾಲದ ಕಾರ್ಪೊರೆಟ್ ಜಗತ್ತು,ಪ್ರಕೃತಿ, ಸೃಷ್ಟಿ - ಬದುಕಿನ ಲಯ ಗತಿಗಳು, ಮಾನವ ಸಂಬಂಧಗಳು, ಧಾರ್ಮಿಕ ಜಿಜ್ಞಾಸೆ ಮತ್ತು ಜಾಗತಿಕ ಪರಿಸ್ಥಿತಿ.