ತಿರುಪತಿಗೆ ಕೇವಲ 30ಕಿ.ಮೀ ದೂರದಲ್ಲಿರುವ ಅತ್ಯಂತ ಪುರಾತನವಾದ ದೇವಾಲಯದ ಲಿಂಗದ ಮೇಲೆ ಇರುವ ಕೆತ್ತನೆ ಒಬ್ಬ ಬೇಡನ ಪ್ರತಿರೂಪವೆ? ಹಾಗಿದ್ದಲ್ಲಿ ಆ ಲಿಂಗಕ್ಕೂ ಆ ಬೇಡನಿಗೂ ಯಾವ ಸಂಬಂಧ?

ಮೆಹರ್ಗಂಜ್‍ನ ಬಲ್ಗಾಡಿಯ ಅರಮನೆಯನ್ನು ರಾಜ ತನ್ನ ಪ್ರೇಯಸಿಗೆ ಕಟ್ಟಿಸಿದ್ದು ಎಂದು ಹೇಳಲಾಗುತ್ತದೆ. ಆದರೆ ಆಕೆ ಏಕೆ ಅಲ್ಲಿ ನೆಲೆಸಲಿಲ್ಲ?

ಪಶ್ಚಿಮ ಬಂಗಾಳದ ಮಾಲ್ಡದ ಬಳಿ ಆಳುತ್ತಿದ್ದ ರಾಜ ಗಣೇಶ್‍ಗೆ ಮುಸ್ಲಿಮ್ ರಾಜಕುವರ ಇರಲು ಹೇಗೆ ಸಾಧ್ಯ? ಆತ ಕಟ್ಟಿಸಿದ ಎನ್ನಲಾದ ಮುಸೋಲಿಯಮ್‍ನ ಮೂರು ಸಮಾಧಿಗಳಲ್ಲಿ ಒಂದು ಹಿಂದೂ ರಾಜನದ್ದೆ? ಆತ ಸಾಯುವ ಮುನ್ನವೆ ಏಕೆ ಅದನ್ನು ಕಟ್ಟಲಾಯಿತು? 

ಇತ್ತೀಚೆಗೆ ಎರಡನೆ ಮಹಾಯುದ್ಧದ ಪರಿಣಿತರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರಪಂಚದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ, ಆ ಇಡೀ ಮಹಾಯುದ್ಧದಲ್ಲಿಯೇ ಅತೀ ಭೀಕರ ಕಾಳಗ ನಡೆದದ್ದು ಭಾರತದ ಈಶಾನ್ಯದಲ್ಲಿ ಎಂದು ತೀರ್ಮಾನಿಸಲಾಯಿತು. ಹಾಗಾದರೆ ಆ ಕಾಳಗ ನಡೆದದ್ದಾದರೂ ಎಲ್ಲಿ? ಏಕೆ? ಯಾರ ನಡುವೆ? ಇದರ ಪರಿಣಾಮಗಳ ಅರಿವು ನಮಗಿದೆಯೆ?

ಇಂತಹ ಕುತೂಹಲಕರ ಚಾರಿತ್ರಿಕ ವಿಷಯಗಳ ಸುತ್ತ ಡಾ. ಗಣೇಶಯ್ಯ ಹೆಣೆದ ಕತೆಗಳ ಸಂಗ್ರಹ ಗುಡಿಮಲ್ಲಮ್.

ಡಾ. ಕೆ.ಎನ್. ಗಣೇಶಯ್ಯ

16 other products in the same category:

Product added to compare.