ಜನಸಮುದಾಯದ ನಡುವೆ ಬದುಕಿನ ದಾಸರು ಈ ಸಮಾಜದ ಕಿಲುಬನ್ನು ತೊಳೆಯುವ ಕೆಲಸ ಮಾಡಿದರು. ಇಲ್ಲಿನ ದೋಷಗಳನ್ನು ಪ್ರಶ್ನಿಸುವ ಮೂಲಕ, ಪ್ರತಿಕ್ರಿಯಿಸುವ ಮೂಲಕ ಸಾಮಾಜಿಕವಾಗಿ ಸ್ಪಂದಿಸಿದರು. ಅದಕ್ಕೆ ಪರಿಹಾರ ನೀಡುವ ಮೂಲಕ ಆ ಮಿತಿಯನ್ನು ದಾಟುವ ಬಗೆಯನ್ನೂ ಹೇಳುತ್ತಾರೆ. ಕರ್ನಾಟಕದ ಸಂಸ್ಕೃತಿ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ದಾಸರ ಕೊಡುಗೆ ಅಪೂರ್ವವಾದುದು. ಸಾಹಿತ್ಯ ಮತ್ತು ಸಂಗೀತದ ಸಾಮರಸ್ಯದ ಪ್ರತೀಕವಾದ ಹರಿದಾಸರ ರಚನೆಗಳು ಶುದ್ಧ ಭಾವಗೀತಗಳು. ಇಂತಹ ಕೀರ್ತನೆಗಳ ಶುದ್ಧ ಪಾಠದ ಸಂಗ್ರಹ ಸಾವಿರಾರು ಕೀರ್ತನೆಗಳು.

ಸಂ: ಪ್ರೊ ಎ.ವಿ.ನಾವಡ,ಗಾಯತ್ರಿನಾವಡ

16 other products in the same category:

Product added to compare.