ಭಾರತೀಯ ಭಾಷಾ ಗಣಕ ಪಿತಾಮಹರೆಂದೇ ಪ್ರಸಿದ್ದರಾದ ಕೆ ಪಿ. ರಾವ್ ಅವರು ಬಹುಮುಖ ಪ್ರತಿಬೆಯುಳ್ಳವರು. ವೇದದಿಂದ ಹಿಡಿದು ಅಣು ವಿಜ್ಞಾನದವರೆಗೆ ಪತ್ರಿಕೋದ್ಯಮ, ಸಂಗೀತ, ಬಹು ಭಾಷಾ ಜ್ಞಾನ, ಕಂಪ್ಯೂಟರ್ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಿರುವ ಪ್ರತಿಭಾವಂತರು.

     "ವರ್ಣಕ " ಅವರ ಈ ಎಲ್ಲಾ ಚಿಂತನೆ ಪ್ರತಿಭೆಗಳ ಹಿನ್ನೆಲೆಯಲ್ಲಿ ರೂಪುತಳೆದ ವಿಶಿಷ್ಟ ಕಾದಂಬರಿ. ಕಲ್ಪನೆ ತಾರ್ಕಿಕತೆಗಳನ್ನು ಮೇಳವಿಸಿಕೊಂಡು ತಕ್ಷಶಿಲೆಯನ್ನು ಕೇಂದ್ರವಾಗಿರಿಸಿ,ಭಾರತೀಯ ಹಾಗೂ ವಿಶ್ವದ ಭಾಷಾ ವಿಜ್ಞಾನದ ಚರಿತ್ರೆಯ ಎತ್ತರದ ನೆಲೆಗಳನ್ನು ಚಿತ್ರಿಸುವ ಸಂಕೀರ್ಣ ರೂಪದಲ್ಲಿರುವ ಅಪರೂಪದ ಕಾದಂಬರಿ ವರ್ಣಕ.

ತಕ್ಷಶಿಲೆ ಪ್ರಾಚೀನ ಭಾರತದ ವಾಣಿಜ್ಯ ಕೇಂದ್ರ ಹೇಗೋ ಹಾಗೆಯೇ ವಿದ್ಯಾಕೇಂದ್ರವಾಗಿಯೂ ಲೋಕ ವಿಖ್ಯಾತವಾದದ್ದು, ವಿಶ್ವಮಾನ್ಯ ವ್ಯಾಕರಣಕಾರ ಪಾಣಿನಿಯಪ್ರಸಿದ್ಧ ವ್ಯಾಕರಣ ಕೃತಿ 'ಅಷ್ಟಾಧ್ಯಾಯ' ರೂಪು ತಳೆದ ತಾಣ. ಈ ಪುಸ್ತಕದ ವಸ್ತು'ವರ್ಣ' ಅಂದರೆ ವರ್ಣಮಾಲೆಗೆ ಅಂದರೆ ಭಾಷೆಗೆ ಸಂಬಂಧಿಸಿದ್ದು. ಕೃತಿ ಮುಖ್ಯವಾಗಿ ಪ್ರಸ್ಥಾನ- ಪ್ರಯಾಣ-ಪ್ರಬೋಧನ ಎಂಬ ಮೂರು ಭಾಗಗಳಲ್ಲಿ ಹರಡಿಕೊಂಡಿದೆ.

ಕೆ. ಪಿ ರಾವ್

16 other products in the same category:

Product added to compare.