'ಬಿಡಾರ' - ಅಶೋಕ್ ಪವಾರ ಬರೆದ ಮರಾಠಿ ಆತ್ಮಕಥೆ. ಓದುಗನನ್ನು ಪುಟ ಪುಟಗಳಲ್ಲೂ ಕಸಿವಿಸಿಗೊಳಿಸುವ ಮತ್ತು ದಿಙ್ಮೂಢಗೊಳಿಸುವ  'ಬೇಲದಾರ' ಎಂಬ ಸಮುದಾಯದವರ ಚಿತ್ರ-ವಿಚಿತ್ರ ಜೀವನ ಇಲ್ಲಿದೆ. 

 ಪಶುಸದೃಶ ಜೀವನವನ್ನು ಸಾಗಿಸುವ ಜನರ ಅಗ್ನಿದಿವ್ಯವನ್ನು ಓದುವಾಗ ಯಾವುದೇ ಸದೃದಯ ವಾಚಕ ಕಂಗೆಟ್ಟು ಹೋಗುವ, ಗಲಿಬಿಲಿಗೊಂಡು ಕಕ್ಕಾವಿಕ್ಕಿಗೊಳ್ಳುವ ದಟ್ಟ ಅನುಭವ ಇಲ್ಲಿದೆ. ಸಾಹಿತ್ಯದಲ್ಲಿ ಮೊದಲಿಗೇ ಇಷ್ಟು ಭಯಾನಕ, ಭೀಷಣ ಮತ್ತು ಭಯವಹಾ ದುಃಖ ವ್ಯಕ್ತವಾಗಿರಬಹುದು. 

'ಬಿಡಾರ' ದ ಓದು ಒಂದು ವಿಭಿನ್ನ ಅನುಭವ ನೀಡುತ್ತದೆ; ಅಷ್ಟೇ ಅಂತರ್ಮುಖಗೊಳಿಸುತ್ತದೆ. ಮನುಷ್ಯನೊಳಗಿರುವ ಮಾನವೀಯತೆಯನ್ನು ಅತ್ಯಂತ ತೀವ್ರವಾಗಿ ಅರಿವಿಗೆ ತಂದು ಕೊಡುವಂಥದ್ದೂ ಆಗಿದೆ. 

 ವಿಷಮ ವ್ಯವಸ್ಥೆಯ ಅಮಾನುಷ ಕ್ರೌರ್ಯದ ಲಕ್ಷಣವೆಂದರೆ ಈ ಕಥನ. ಭಿಕ್ಷೆ ಮತ್ತು ಹಸಿವು,ಬಡತನ ಮತ್ತು ಅಪರಾಧ -ಈ ಇಕ್ಕುಳದೊಳಗೆ ಸಿಕ್ಕು ಜರ್ಜರಿತಗೊಂಡ ಜ್ವಲಂತ ದುರಂತ ಗಾಥೆ.

ಚಂದ್ರಕಾಂತ ಪೋಕಳೆ

16 other products in the same category:

Product added to compare.