• New product

ತುಂಬಾ ಹಿಂದಿನಿಂದಲೂ ಅತಿಮಾನುಷತೆಯ ಬಗ್ಗೆ ಕತೆಗಳು ಇದ್ದವಾದರೂ ಆಗ ಸರಿಯಾದ ಸಾಕ್ಷಿಗಳಿಲ್ಲದೇ ಅವೆಲ್ಲವೂ ಕೇವಲ ಕತೆಗಳಾಗಿ ಉಳಿದು ಹೋಗಿದ್ದವು. ಆದರೆ ಈಗ ಹಾಗಲ್ಲ,           ಪ್ಯಾರಾನಾರ್ಮಲ್ ಕ್ಷೇತ್ರವೆನ್ನುವುದು ಸಾಕಷ್ಟು ಬೆಳವಣಿಗೆ ಕಂಡಿದೆ. ತಾರ್ಕಿಕ ವಿಶ್ಲೇಷಣೆ, ಸಂಶೋಧನಾ ಸಾಮರ್ಥ್ಯ ಮತ್ತು ಅಧ್ಯಯನಗಳಿಂದಲೂ ಒಂದು ಕಾಲಕ್ಕೆ ಕೇವಲ ಭ್ರಮೆಯಷ್ಟೇ ಎನ್ನಿಸುವಂತಿದ್ದ ಕೆಲವು ವಿಷಯಗಳು ಈಗ, ಕೇವಲ ಭ್ರಮೆಯಲ್ಲ, ಭ್ರಮೆಯನ್ನು ಮೀರಿದ್ದು ಇನ್ನೇನೋ  ಇದೆ ಎನ್ನುವ ಭಾವನೆಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿವೆ. ಸರಿಯಾಗಿ ಗಮನಿಸಿದರೆ ಪ್ಯಾರಾನಾರ್ಮಲ್ ಕ್ಷೇತ್ರ ಕೂಡ, ಸೈಕಾಲಜಿ,ಭೌತಶಾಸ್ತ್ರ ಪರಿಸರ ವಿಜ್ಞಾನ ಮತ್ತು ಮನುಷ್ಯ ಗ್ರಹಿಕೆ ಭಾಗವೇ ಎನ್ನುವುದು ಅರ್ಥವಾಗುವುದು ಕಷ್ಟವೇನಲ್ಲ.

  ಎಲ್ಲಕ್ಕಿಂತ ಹೆಚ್ಚಾಗಿ ಈ ಬಗೆಯ ಓದು,ಓದುಗನ ಕಲ್ಪನಾ ಶಕ್ತಿಯನ್ನು ಒರೆಗೆ ಹಚ್ಚುತ್ತದೆ. ಓದುಗನ ಆಲೋಚನಾ ಶಕ್ತಿಯನ್ನು ವೃದ್ಧಿಸುತ್ತಲೇ ಈ ರೀತಿಯ ವಸ್ತುಗಳೆಡೆಗಿನ ಸಿನಿಕತನವನ್ನೂ ಸಹ ಕಡಿಮೆ ಮಾಡುತ್ತವೆ. ಹಾಗೆ ಮಾಡುವುದರ ಮೂಲಕ ಮುಕ್ತ ಮನಸ್ಸಿನಿಂದ ಈ ಕ್ಷೇತ್ರದ ಬಗ್ಗೆ ಯೋಚಿಸುವಂತೆ ಮಾಡುತ್ತವೆ. ಅನಾವಶ್ಯಕವಾಗಿ ಭಯ ಹುಟ್ಟಿಸುವ ವಿಷಯಗಳು ಅರಿವಿಗೆ ಸಿಕ್ಕುತ್ತವೆ. ಇಲ್ಲಿ ನಮ್ಮನ್ನೂ ಮೀರಿದ್ದು ಇನ್ನೇನೋ ಇದೆ ಎನ್ನುವುದು ಅರಿವಾಗಿ ಭಯ ಕಡಿಮೆಯಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರೂ ಅತಿಶಯೋಕ್ತಿಯಲ್ಲ. 

                                                                                                                                                                                                 - ದೇವರಾಜ್ ಸನ್ಯಾಲ್ 

ಗುರುರಾಜ ಕೊಡ್ಕಣಿ, ಯಲ್ಲಾಪುರ

16 other products in the same category:

Product added to compare.