ಕನ್ನಡ ಸಾಹಿತ್ಯಲೋಕದಲ್ಲಿ ಗಣೇಶಯ್ಯನವರದು ವಿಶಿಷ್ಟ ಹೆಸರು. ತಮ್ಮ ವೈಜ್ಞಾನಿಕ ಐತಿಹಾಸಿಕ ಕಥಾನಕಗಳ ಮೂಲಕ ಹೊಸ ಮಾರ್ಗವನ್ನು ತೆರೆದ ಪ್ರವರ್ತಕರಿವರು. `ಭಿನ್ನೋಟ' ಅಂತಹದ್ದೊಂದು ಪ್ರಯತ್ನ. `ಭಿನ್ನೋಟ'ದಲ್ಲಿ, ನಾವು ಅತೀ ಸಹಜ ಎಂದುಕೊಂಡಿರುವ, ನಮ್ಮ ಗಮನವನ್ನೇ ಸೆಳೆಯದ, ನಮ್ಮಲ್ಲಿಯೇ ಅಂತರ್ಗತವಾಗಿರುವ, ಜೀವನದ ಹಲವು ನಡೆ ನುಡಿಗಳ ಮೂಲವನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ - ಅವನ್ನು ಅರಿತುಕೊಳ್ಳುವುದರಿಂದ ನಮ್ಮ ಜೀವನ ಬದಲಾಗುತ್ತದೆ ಎಂಬ ಹಿರಿದಾದ ಆಕಾಂಕ್ಷೆಯಿಂದಲ್ಲ; ನಮ್ಮ ವರ್ತನೆಯ ಮೂಲವನ್ನು ಅರಿಯುವುದರಿಂದ ನಮ್ಮನ್ನು ನಾವೇ ಅರಿತುಕೊಳ್ಳಬಹುದು ಎಂಬ ನಂಬಿಕೆಯಿಂದ. ಭಿನ್ನ ರೀತಿಯ ಈ ಲೇಖನಗಳು ನಮ್ಮಲ್ಲಿ ಸಾಕಷ್ಟು ಅಚ್ಚರಿ-ವಿಚಾರವನ್ನು ಉಂಟುಮಾಡುತ್ತವೆ.

ಡಾ. ಕೆ.ಎನ್. ಗಣೇಶಯ್ಯ

16 other products in the same category:

Product added to compare.