'ಮಾತೋಶ್ರೀ ಮಾದಕ' ಕಂಬಾರರ ಇತ್ತೀಚಿನ ವಿಶಿಷ್ಟ ಬಗೆಯ ಪ್ರಹಸನ. ಆಧುನಿಕತೆ ಹಾಗೂ ಪಾರಂಪರಿಕ ದೇಶೀ ಜ್ಞಾನದ ಸಂಘರ್ಷವನ್ನು ಹೇಳುವಂಥದ್ದು.ಆಧುನಿಕ ಬದುಕು ದೇಶಿಜ್ಞಾನದ ಸದ್ಬಳಕೆಯ ಹದವಾದ ಮಿಶ್ರಣ ಎಷ್ಟೆಲ್ಲಾ ಸಂಕಷ್ಟವನ್ನು ದೂರ ಮಾಡಬಲ್ಲದೆಂಬುದನ್ನು ವಿನೋದಮಯ, ಪ್ರೇಮಕತೆಯ ಮುಖಾಂತರ ಕಂಬಾರರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ದೇಶೀ ಜ್ಞಾನದ ನಿಧಿಯಾದ ಮುಗ್ಧ ರಾಚೋಟಿ ಪಾತ್ರ ಒಂದೆಡೆಯಾದರೆ,ಅವನ್ನು ತಮ್ಮ ರಾಜಕೀಯಕ್ಕೆ,ಲಾಭಕ್ಕೆ ಬಳಸುವ ಮಂದಿ ಇನ್ನೊಂದೆಡೆ.ಈ ಪಾರಂಪರಿಕ ಸಂಪತ್ತನ್ನು ಸೂಕ್ತ ಕೈಗಳಲ್ಲಿರಿಸಿ ಸಂರಕ್ಷಿಸುವ ಅಗತ್ಯವಿದೆ ಎಂಬ ಆಶಯವನ್ನು ನಾಟಕ ಸಾಂಕೇತಿಕವಾಗಿ ಹೇಳುತ್ತದೆ.

ಚಂದ್ರಶೇಖರ ಕಂಬಾರ

16 other products in the same category:

Product added to compare.