"ಒಬ್ಬ ಕವಿಯ ಕಾವ್ಯಯಾತ್ರೆ ಹೇಗಿರಬೇಕು, ಆತನ ಸಂವೇದನೆ ಯಾವ ಯಾವ ಬಂದರುಗಳನ್ನು ಮುಟ್ಟಬೇಕು- ಇದೆಲ್ಲದರ ಉತ್ತಮ ನಿದರ್ಶನ ಚಂದ್ರಶೇಖರ ಕಂಬಾರ, ಆತನ ಪ್ರಾಮುಖ್ಯತೆಯನ್ನು ಗುರುತಿಸಿದ ಮೊದಲಿಗರಲ್ಲಿ ನಾನೊಬ್ಬ. ಆವಾಗಿನಿಂದ ಆತನ ಬೆಳವಣಿಗೆ, ವೈವಿಧ್ಯ, ಹರಡುತ್ತಾ ಇರುವ ಕಾವ್ಯಕುತೂಹಲಗಳನ್ನು ಗಮನಿಸುತ್ತಲೇ ಬಂದಿದ್ದೇನೆ. ಈ ಕಂಬಾರರ dynamism ಒಂದು ಅಪರೂಪದ ದೊಡ್ಡತನದ ಕುರುಹು ಅಂತ ಹೇಳಬಹುದಲ್ಲವೇ ? ಈಗಿನ ಸಂಕಲನದಲ್ಲಿ ಒಂದು ಮಾಗಿದ ಕಾವ್ಯ ಪ್ರತಿಭೆ, ತನ್ನದೇ ಆದ ಪ್ರತಿಭಾ ಯಾತ್ರೆಯನ್ನು ಮರುಗಮನಿಸಿ, ಹಿಗ್ಗಿ ತೃಪ್ತಿಪಡುವುದನ್ನು ನಾವು ಕಾಣುತ್ತೇವೆ. ಆ ತುಷ್ಟಿಯಲ್ಲಿ ಭಾಗಿಗಳಾಗುತ್ತೇವೆ. ಕಾವ್ಯಸಂವೇದನೆ ಹೇಗೆ ಬೆಳೆಯುತ್ತದೆ, ಹಬ್ಬುತ್ತದೆ, ಕೃತಾರ್ಥವಾಗುತ್ತದೆ ಅನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ". ಎಂದು ಹೇಳಿದ್ದಾರೆ ರಾಜೀವ ತಾರಾನಾಥ್ ರವರು.

ಚಂದ್ರಶೇಖರ ಕಂಬಾರ

16 other products in the same category:

Product added to compare.