"ಕವಿತೆ ನನಗೆ ನನ್ನನ್ನು ಒಡೆದು ಮನಸ್ಸನ್ನು  ಕಾಣಿಸುತ್ತದೆ. ಮಂಜುಗಡ್ಡೆಯ ಒಳಬಂಧ ಸಡಿಲವಾಗಿ ಕರಗುವಂತೆ ಮಾಡುವ ಶಾಖ ಅದು.ಹಾಗೆ ಕರಗುವುದೇ ಅನುಭವ,ಕವಿತೆ. ನಾನು ಎಂಬ ಗಟ್ಟಿಯಾದ ನೆಲೆಯಿಂದ ಎಲ್ಲವನ್ನೂ ಅನುಭವಿಸುವುದು ಎಂಬುದು ಹೋಗಿ, ನಾನೊಂದು ಕಿಟಕಿ ಬಾಗಿಲುಗಳನ್ನು ತೆರೆದಿಟ್ಟ ಮನೆಯಂತಾಗಿ ಬೆಳಕು ಗಾಳಿಗಳೆಲ್ಲ ಮನಸೋ ಇಚ್ಛೆ ಹಾಯ್ದು ಬರುವಂತೆ ಆಗುತ್ತದೆ. ನನ್ನ ಮೇಲೆ ಕವಿತೆಯ ಪ್ರಭಾವ ಇದು.ಎನ್ನುವ ಕವಿ ಮಂಜುನಾಥ್ ಕನ್ನಡದ ಮಹತ್ವದ ಕವಿಗಳಲೊಬ್ಬರು.ಅವರ ೮ ಕವನ ಸಂಕಲನಗಳು ಸೇರಿರುವ ಮಹತ್ವದ ಸಂಕಲನವಿದು.

ಎಸ್. ಮಂಜುನಾಥ್

16 other products in the same category:

Product added to compare.