ಕನ್ನಡ ನೆಲವು ಕೊಡಮಾಡಿದ ಅದ್ಭುತ ಇಂಜಿನಿಯರಿಂಗ್ ಪ್ರತಿಭೆ ಸರ್ ಎಂ. ವಿಶ್ವೇಶ್ವರಯ್ಯನವರು. ತಮ್ಮ ಅಸಾಮಾನ್ಯ ಬುದ್ಧಿವಂತಿಕೆಯಿಂದ ಬದುಕಿದ್ದಾಗಲೇ ದಂತಕಥೆಯಾದವರು. ಸರ್ ಎಂ. ವಿಶ್ವೇಶ್ವರಯ್ಯನವರಿಗೆ 100 ವರ್ಷ ತುಂಬಿದ ಸಂದರ್ಭದಲ್ಲಿ ಅವರ ಜೀವನ-ಸಾಧನೆಯನ್ನು ಕುರಿತು ತಿ.ತಾ. ಶರ್ಮರು ಬರೆದಂತಹ ಪುಸ್ತಕವಿದು. ಪ್ರಧಾನ ಮಂತ್ರಿ ಜವಹರ್ ಲಾಲ್ ನೆಹರು ಅವರು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ ಪುಸ್ತಕ ಎಂಬ ಮಹತ್ವದ ಹಿನ್ನೆಲೆಯೂ ಈ ಕೃತಿಗಿದೆ. ಇತಿಹಾಸ ಹಲವರನ್ನು ನಿರ್ಮಿಸುತ್ತದೆ. ಆದರೆ ಕೆಲವರು ತಾವೇ ಇತಿಹಾಸ ನಿರ್ಮಿಸುತ್ತಾರೆ. ಅಂತಹವರಲ್ಲೊಬ್ಬರು ಸರ್ ಎಂ.ವಿ. ಇವರ ಜೀವನ-ಸಾಧನೆಯ ಚಿತ್ರಣವನ್ನು ತಿ.ತಾ. ಶರ್ಮರು ಈ ಕೃತಿಯಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ.

ತಿ.ತಾ. ಶರ್ಮ

16 other products in the same category:

Product added to compare.