ವಿಂಬಲ್ಡನ್ನಿನ ಹೀಲ್ಡಾ ಸೆಲಿಗ್ಮೆನ್ ಎಂಬ ಕಾದಂಬರಿಕಾರ್ತಿ 1940 ರಲ್ಲಿ ಬರೆದ ಕಾದಂಬರಿ ಇದು.ಪಾಶ್ಚ್ಯಾತ್ಯರು ಭಾರತೀಯ ಇತಿಹಾಸವನ್ನು ನೋಡುವ ವಾಸ್ತವವಾದಿ ಕ್ರಮವನ್ನು ಈ ಕಾದಂಬರಿಯಲ್ಲಿ ಕಾಣಬಹುದು. 

   ಲೇಖಕಿ, ಚಂದ್ರಗುಪ್ತ ಮೌರ್ಯ ಆಳಿದ ಪ್ರದೇಶಗಳಿಗೆ ಭೇಟಿ ನೀಡಿ ಹಿಮಾಲಯದ ತಪ್ಪಲು ಪ್ರದೇಶಗಳೆಲ್ಲೆಲ್ಲ ಸಂಚಾರ ಮಾಡಿ, ಸಿಕ್ಕ ಸ್ಥಳೀಯ ಮಾಹಿತಿಗಳನ್ನು ಕಲೆಹಾಕಿ, ಶಿಲಾಶಾಸನಗಳನ್ನು ಅಧ್ಯಯನ ಮಾಡಿ ಸುಂದರ ಕಲ್ಪನೆಯನ್ನೂ ಸೇರಿಸಿ ಅತ್ಯುತ್ತಮ ಐತಿಹಾಸಿಕ ಕಾದಂಬರಿಯನ್ನು ರಚಿಸಿದ್ದಾರೆ. 

   ಕುರಿಕಾಯುವವರ ಪಾಲನೆ ಪೋಷಣೆಯಲ್ಲಿ ಬೆಳೆದ ಚಂದ್ರಗುಪ್ತ, ಚಾಣಕ್ಯನನ್ನು ಸಾರ್ಥರ ಹಾದಿಯಲ್ಲಿ ಭೇಟಿಯಾಗಿ ಪರಸ್ಪರ ಕೊಡು ಕೊಳುವಿಕೆಯಿಂದ ಒಂದು ಬಲಿಷ್ಠ ರಾಜ್ಯವನ್ನು ಕಟ್ಟುವ ಕನಸು ಕಂಡು ಆ ಕನಸನ್ನು ನನಸಾಗಿಸಿಕೊಳ್ಳುತ್ತಾನೆ. 

  ಚಾಣಕ್ಯನಿಗೂ ಚಂದ್ರಗುಪ್ತನಿಗೂ ಮಗಧದ ರಾಜರಾದ ನಂದರಿಂದ ಅವಮಾನವಾದದ್ದರಿಂದ ಅವರಿಬ್ಬರೂ ಚಿಂತನ ಮಂಥನ ನಡೆಸಿ ಗುಡ್ಡಗಾಡು ಜನರ ಬಲಿಷ್ಠ ಸೈನ್ಯ ಕಟ್ಟಿ ನಂದರನ್ನು ಸೋಲಿಸಿ ನಾಶಪಡಿಸುತ್ತಾರೆ. ಬಲಿಷ್ಠ ಮೌರ್ಯ ಸಾಮ್ರಾಜ್ಯವನ್ನು ಕಟ್ಟುತ್ತಾರೆ. 

   ಮೂಲ ಇಂಗ್ಲಿಷ್ ಕಾದಂಬರಿಯ ವಿಕ್ಟೋರಿಯಾ ಕಾಲದ ಇಂಗ್ಲಿಷ್ ಭಾಷೆಯನ್ನು ಈ ಕಾಲದ ಕನ್ನಡಕ್ಕೆ ಭಾಷಾಂತರಿಸುವುದು ಸುಲಭದ ಕೆಲಸವಲ್ಲ. ಇದನ್ನು ಕನ್ನಡಕ್ಕೆ ಭಾಷಾಂತರಿಸಿದ ಸಾಧನೆ ಉದಯಕುಮಾರ ಹಬ್ಬು ಅವರದು.

ಅನು: ಉದಯಕುಮಾರ ಹಬ್ಬು

16 other products in the same category:

Product added to compare.