ಕಳೆದ ಮೂರು ದಶಕಗಳಲ್ಲಿ  ಸಾಪ್ತಾಹಿಕ, ವಾರಪತ್ರಿಕೆ, ಮಾಸಿಕ, ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು. ಯಾವುದೇ ಕ್ಲಿಷ್ಟತೆಯಿಲ್ಲದೆ ಸರಳ ಭಾಷೆ, ನಿರೂಪಣೆ, ನೇರ ಕತೆಗಾರಿಕೆಗಳಿಂದ ಒಮ್ಮೆಲೆ ಓದುಗನ ಮನದಾಳಕ್ಕಿಳಿದು ಬಿಡುತ್ತಾರೆ. ಮಹಿಳಾ ಓದುಗರಂತೂ ವಸುಮತಿಯವರ ಕಥೆಗಳೆಂದರೆ ಪಂಚಪ್ರಾಣ.

ಮಲೆನಾಡಿನ ಪರಿಸರ , ಭಾಷೆ, ಜೀವನ ಶೈಲಿ ಇವರ ಬಹುತೇಕ ಕತೆಗಳ ವಸ್ತು. ' ಬಂದನಾ ಹುಲಿರಾಯ', 'ಅಗ್ನಿದಿವ್ಯ', 'ಮೃಗತೃಷ್ಣಾ', ಪಾತಾಳ ಗರಡಿ; ' ನಮ್ಮ ನಡುವಿನ ಕಾಂತಾಮಣಿಯರು', 'ಅಂತರಂಗದ ಪಿಸುನುಡಿ', ' ಸಂಕ್ರಮಣ' ಇವರ ಪ್ರಮುಖ ಕಥಾ ಸಂಕಲನಗಳು. ಕತೆಗಳಂತೆಯೇ ' ಪರಿವರ್ತನೆ' ' ಸಂಬಂಧಗಳು', 'ವಿಮೋಚನ' ಮುಂತಾದ ಕಾದಂಬರಿಗಳೂ ಜನಮನ ಸೂರೆಗೊಂಡಿವೆ.

      ಮಹಿಳೆಯರೇ ಕೇಂದ್ರಪಾತ್ರಗಳಂತೆ ಕಂಡರೂ ಯಾವುದನ್ನೂ ವೈಭವೀಕರಿಸದೆ, ನಿರ್ಭಾವುಕರಾಗಿ ಇಡೀ ಬದುಕನ್ನು ಕಂಡದ್ದು ಕಂಡ ಹಾಗೆ ಚಿತ್ರಿಸುತ್ತಾರೆ.

ವಸುಮತಿ ಉಡುಪ

16 other products in the same category:

Product added to compare.