ಶ್ರೀಧರ ಬಳಗಾರ ಅವರು ನಲವತ್ತು ವರ್ಷಗಳಿಂದ ಮಲೆನಾಡ ಒಡಲಲ್ಲಿರುವ ಕುಟುಂಬಗಳ ಕತೆಗಳನ್ನು ನಿರೂಪಿಸುತ್ತ ಬಂದಿದ್ದಾರೆ. ಕತೆಗಳು ಕತೆಗಾರನನ್ನು ಮಾಗಿಸುತ್ತ, ತಾವೂ ಮಾಗುತ್ತ ಓದುಗರ ಕೈ ಸೇರುತ್ತಿವೆ. ಕಥೆಗಾರ ಈಗ ಕತೆಗಳನ್ನು ಹುಡುಕುವುದಿಲ್ಲ ಅವು ಕಥೆಗಾರನ ಬಳಿ ಬಂದು ಸುಮ್ಮನೆ ನಿಲ್ಲುತ್ತವೆ. ಸದ್ದು ಮಾಡದೆ ತಾವಾಗಿಯೇ ಬಳಿ ಬಂದು ನಿಲ್ಲುವ ಕಥೆಗಳಿಗೆ  ಸದ್ದಿಲ್ಲದ ನುಡಿ ನಿರೂಪಣೆಯ ಸಹಜ ಚಂದ ಕಲ್ಪಿಸುವ ಕಸುಬು ಕತೆಗಾರನಿಗೆ ಸಿದ್ಧಿಸಿದೆ.

ಮನುಷ್ಯನಿಗೆ ಸುಸ್ಥಿರ ಬಾಳ್ವೆ ಎಂಬುದು ಹಿಂದೆಯೂ ಇರಲಿಲ್ಲ; ಈಗಲೂ ಇಲ್ಲ; ಮುಂದೆಯೂ ಇರಲಾರದು. ನೆಲದ ಬದುಕಿನಲ್ಲಿ ಕೇಡು-ಒಳಿತು ಒಟ್ಟೊಟ್ಟಿಗೇ ಇರುವುದರಿಂದ ಮನುಷ್ಯ ಬದುಕಿಗೊಂದು ಸವಾಲಿದ್ದೇ ಇರುತ್ತದೆ.ಈ ಸವಾಲನ್ನೇ ಸ್ವೀಕರಿಸಿ ಸಂಶಯವಿಲ್ಲದೆ ದೈವಗಳನ್ನು ನಂಬಿ ನೆಲೆ ಪಡೆಯುವ ಇಲ್ಲಿನ ಬಾಳೆ, ಹಿರಿದಾಗಿ ಕಾಣುತ್ತದೆ. ಕಾಣಿಸುವ ಕಥೆಗಾರನ ಕಸುಬಿನಲ್ಲಿ ದೈವತ್ವ ಬೆರೆತು ನಿಂತಿದೆ.

                                                                                                                                                                          -ಅಮರೇಶ ನುಗಡೋಣಿ 

ಶ್ರೀಧರ ಬಳಗಾರ

16 other products in the same category:

Product added to compare.