"ಶರಾವತೀ ತೀರದ ಕಗ್ಗಾಡು ಕಣಿವೆಯ ನಡುವಲ್ಲಿ ಶತಶತಮಾನಗಳಿಂದ ಬದುಕನ್ನು ಕಟ್ಟಿಕೊಂಡು ನೆಮ್ಮದಿಯಾಗಿದ್ದವರ ಬದುಕು ಜೋಗ್ ಯೋಜನೆಯಿಂದ ಶಿಥಿಲಗೊಂಡ ಬಗೆಯನ್ನು ಚಿತ್ರಿಸುವುದು ಕೃತಿಯ ಪ್ರಧಾನ ಆಶಯವಾದರೆ ಪ್ರಾಜೆಕ್ಟೊಂದರ ಅನುಷ್ಠಾನದಲ್ಲಿ ವೃತ್ತಿನಿಷ್ಠೆ ಮತ್ತು ಬದ್ಧತೆಯನ್ನು ಮೆರೆದು ನಾಡಿನ ಶ್ರೇಯೋಭಿವೃದ್ಧಿಗಾಗಿ ಸ್ವತಃ ಸಂಕಷ್ಟಗಳಿಗೆ ಒಳಗಾಗುವವರ ಕುರಿತು ಹೇಳುವುದೂ ಇದರ ಇನ್ನೊಂದು ಉದ್ದೇಶ'' ಎಂದಿದ್ದಾರೆ ಲೇಖಕ ಗಜಾನನ ಶರ್ಮಾ. ``ಕಾದಂಬರಿಯಲ್ಲಿ ಲೇಖಕರು ಎರಡು ಮಹತ್ವದ ಮಜಲುಗಳನ್ನು ದಾಟಿದ್ದಾರೆ. ಒಂದು, ನಮಗೆ ಈವರೆಗೆ ಗೊತ್ತಿದ್ದ ಶರಾವತಿಗಿಂತ ಭಿನ್ನವಾದ ಶರಾವತಿಯನ್ನು ತೋರಿಸಿಕೊಟ್ಟದ್ದು. ಎರಡು, ಶರಾವತಿಯ ಪರಿಸರದ ಜೊತೆಗೇ ಬದುಕನ್ನು ಹೆಣೆದದ್ದು. ಇವೆರಡೂ ಅವರನ್ನು ವಿಶಿಷ್ಟವಾದ ಕಥನಕಾರರನ್ನಾಗಿ ಮಾಡಿದೆ. ಇಡೀ ಕತೆಯಲ್ಲಿ ಮನೋಲಹರಿಯಷ್ಟೇ ಗಾಢವಾಗಿ ವ್ಯಾವಹಾರಿಕ ವಿವರಗಳೂ ಬರುತ್ತವೆ. ಆ ವಿವರಗಳ ಒಳಗೆ ಈ ವಿವರಗಳು ಸೇರಿಕೊಳ್ಳುವ ಬಗೆ ಸೊಗಸಾಗಿದೆ. ಇಂಥ ಕತೆಗಳು ಕನ್ನಡದಲ್ಲಿ ಅಪರೂಪ. ಇಂಗ್ಲಿಷಿನಲ್ಲಿ ಅನೇಕರು ಹೀಗೆ ವಾಸ್ತವ ಮತ್ತು ಕಲ್ಪನೆಯನ್ನು ಬೆಸೆಯುವ ಕೆಲಸ ಮಾಡಿದ್ದಾರೆ. ಇದು ಒಂದು ರೀತಿಯಲ್ಲಿ ಕಥಾಸಾಕ್ಷ್ಯಚಿತ್ರದಂತಿದೆ'' -ಜೋಗಿ

ಡಾ| ಗಜಾನನ ಶರ್ಮಾ

16 other products in the same category:

Product added to compare.