"ಸಾಮಾಜಿಕ ಏರಿಳಿತಗಳ ಆ ಯುಗದಲ್ಲಿ ಕೇವಲ ಆದ್ಯಾತ್ಮಿಕ ಶಕ್ತಿ ಈ ಎಲ್ಲ ಸವಾಲುಗಳನ್ನು ಎದುರಿಸಲು ಸಾಲದು ಎಂದು ಆದಿಶಂಕರಾಚಾರ್ಯರು ಮನದಟ್ಟಾಯಿತು. ಆದ್ದರಿಂದ ಅವರು ವೀರಯೋಧರನ್ನು ತಯಾರು ಮಾಡಿದರು. ಅವರಿಗೆ ತರಭೇತಿಯನ್ನು ಕೊಡಲು ನಿರ್ಮಿಸಿದ ಮಠಗಳೇ ಅಖಾಡಗಳು ಎಂದಾಯಿತು. ತರಭೇತಿ ಪಡೆದ ವೀರರ ಪಡೆ ವಿದೇಶಿ ಆಕ್ರಮಣಕಾರಿಗಳಿಂದ ಜನರನ್ನು ರಕ್ಷಿಸುವ ಕವಚವಾಯಿತು. ರಾಜ, ಮಹಾರಾಜರು ಸಹ ವಿದೇಶಿ ಆಕ್ರಮಣದ ಪರಿಸ್ಥಿತಿಯಲ್ಲಿ ಅವರ ಸಹಕಾರವನ್ನು ಪಡೆಯುತ್ತಿದ್ದರು. ಇತಿಹಾಸದಲ್ಲಿ ಇಂಥ ಗೌರವದ ಸ್ಥಾನ ನಾಗಾಸಾಧು ಯೋಧರದು. ಅವರು ತಮ್ಮ ಜೀವನದ ಹಂಗು ತೊರೆದು ಯುದ್ಧದಲ್ಲಿ ಭಾಗವಹಿಸುತ್ತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಅಖಾಡಗಳು ಸೈನ್ಯದ ವೃತ್ತಿಯಿಂದ ದೂರವಾದವು. ನಂತರದಲ್ಲಿ ನಾಗಾಸಾಧುಗಳು ಭಾರತೀಯ ಸಂಸ್ಕೃತಿ ಮತ್ತು ದರ್ಶನದ ಸನಾತನ ಮೌಲ್ಯಗಳನ್ನು ಅಧ್ಯಯನ. ಅನುಪಾಲನೆ ಮಾಡುತ್ತಾ ಸಂಯಮ ಜೀವನವನ್ನು ನಡೆಸುವ ವ್ರತವನ್ನು ಧಾರಣೆ ಮಾಡಿದರು." 

ಅನು:ಎಂ.ವಿ.ನಾಗರಾಜರಾವ್

16 other products in the same category:

Product added to compare.