ನೊಬೆಲ್ ಪ್ರಶಸ್ತಿ ಪುರಸ್ಕೃತ ಚೀನಿ ಕಾದಂಬರಿ ಗುಡ್ ಅರ್ತ್. ಮೂಲ ಇಂಗ್ಲೀಷ್ನದಾದರೂ ಇದೊಂದು ಅನುವಾದಿತ ಕೃತಿ ಎನಿಸುವುದೇ ಇಲ್ಲ ಕನ್ನಡದ್ದೇ ಕೃತಿಯೊಂದನ್ನು ಓದಿದ ಅನುಭವ ನೀಡುತ್ತದೆ. ಕಾದಂಬರಿ ಕುರಿತು ಅನುವಾದಕರ ಕೆಲವು ಮಾತುಗಳು ಹೀಗಿವೆ.

   ಭೂಮಿ ತನ್ನನು ನಂಬಿದವರನ್ನೆಂದೂ ಕೈ ಬಿಡುವುದಿಲ್ಲ. ಮನುಷ್ಯ ತನ್ನ ಮಡಿಲಲ್ಲಿ ಸುರಿದ ನೂರು ಮಡಿಯಷ್ಟು ಸಂಪತ್ತನ್ನು ಅದು ಅವನಿಗೇ ಹಿಂತಿರುಗಿಸುತ್ತದೆ. ಭೂಮಿಯನ್ನು ನಂಬಿ ಬದುಕುವ ಮಂದಿಯಲ್ಲಿ ಮುಗ್ಧತೆ ಮತ್ತು ಹೃದಯ ವೈಶಾಲ್ಯತೆ ಇರುತ್ತದೆ, ಇಲ್ಲಿ ಕೆಟ್ಟವರು ಕಡಿಮೆ ಮತ್ತು ಅಂಥವರು ನಿಜವಾದ ಕೃಷಿಕರಾಗಿರುವುದಿಲ್ಲ. ಅವರು ಮೈಗಳ್ಳರೂ, ಸದಾ ಬೇರೆಯವರನ್ನು ಅವಲಂಬಿಸಿ ಬದುಕುವ ಪರೋಪಜೀವಿಗಳೂ ಆಗಿರುತ್ತಾರೆ. ಇತರರನ್ನು ವಂಚಿಸುವುದಲ್ಲದೆ ಆತ್ಮವಂಚನೆಯನ್ನೂ ಮಾಡಿಕೊಳ್ಳುತ್ತಾರೆ. ಒಳ್ಳೆಯವರು ಅವರನ್ನು ಸಹಿಸಿಕೊಳ್ಳುತ್ತಾರೆ. ಏಕೆಂದರೆ ಒಳ್ಳೆಯತನದ ಬೇರುಗಳೇ ತಾಳ್ಮೆ ಮತ್ತು ಕರುಣೆ. ಆದರೆ ಕೊನೆಯಲ್ಲಿ ಕೆಟ್ಟದ್ದು ಕೆಳಗೆ ಬಿದ್ದು ಒಳ್ಳೆಯದು ಗೆಲ್ಲುತ್ತದೆ. ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಪರ್ಲ್ ಎಸ್ ಬಕ್ ಬರೆದ ಕಾದಂಬರಿಯಿದು. ಪಾತ್ರಗಳು- ಸನ್ನಿವೇಶಗಳು-ಘಟನೆಗಳು-ಸಂಸ್ಕೃತಿ-ಜೀವನ ಕ್ರಮಗಳು ಅಪ್ಪಟ ಚೀನಿಯವಾದರೂ, ಅವುಗಳ ಅಂತಃಸತ್ವ ದೇಶ-ಕಲಾತೀತವಾಗಿ ಇರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ.

ಅನು:ಪಾರ್ವತಿ ಜಿ. ಐತಾಳ್

16 other products in the same category:

Product added to compare.