"ಶೂದ್ರ ಶ್ರೀನಿವಾಸ್ ಅವರ `ಯಾತ್ರೆ' ಕಾದಂಬರಿ ಮನುಷ್ಯರ ಅಂತರಂಗದ ಆಲೋಚನೆ ಮತ್ತು ಕ್ರಿಯಾಭಿಲಾಷೆಗಳ ಪಯಣದ ಕಥೆಯೇ ಆಗಿದೆ. ನಿರಂತರವಾದ ಬಾಳಿನ ಈ ಯಾನದಲ್ಲಿ ಮನುಷ್ಯ ಜೀವಿಯನ್ನು ಸದಾ ಕಾಡುವ, ಬಾಧಿಸುವ, ಖುಷಿಕೊಡುವ, ಚೈತನ್ಯಶೀಲಗೊಳಿಸುವ ಹಲವು ಭಾವಗಳ ತೀವ್ರವಾದ ಶೋಧ ಈ ಕಥನದಲ್ಲಿದೆ; ಅಂಥ ಭಾವಗಳಲ್ಲಿ ಕಾಮ, ಅದರ ತೀವ್ರತೆ ಅದು ಹುಟ್ಟಿಸುವ ಧನ್ಯತೆ, ಪಾಪಪ್ರಜ್ಞೆಗಳ ಸೂಕ್ಷ್ಮವಾದ ನೆಲೆಗಳನ್ನು ಇಲ್ಲಿ ಪ್ರಧಾನವಾಗಿ ದಾಖಲಿಸಲಾಗಿದೆ. ಈ ತುಡಿತಗಳೇ ಯಾವ ಬಗೆಯಲ್ಲಿ ಮಾನವೀಯ ಬದುಕಿನ ಮೂಲವಾಗುತ್ತವೆ ಎಂಬುದನ್ನು ಈ ಕಥನವು ಕಾಣಿಸುತ್ತದೆ'' -ಜಯಶಂಕರ್ ಹಲಗೂರು.

ಶೂದ್ರ ಶ್ರೀನಿವಾಸ್

16 other products in the same category:

Product added to compare.