ಲಾರಾ ಇಂಗಲ್ಸ್ ವೈಲ್ಡರ್ 1867ರಲ್ಲಿ ಅಮೆರಿಕಾದ ವಿಸ್ಕಾನ್ಸಿನ್ನಿನ (ಬಿಗ್ವುಡ್ಸ್) ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಾಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಒಂಬತ್ತು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನಲ್ಲಿ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ಅಮೆರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಗಾರ್ತ್ ವಿಲಿಯಂಸ್ ಈ ಎಲ್ಲ ಕಾದಂಬರಿಗಳಿಗೂ ವಿಶೇಷವಾದ ಚಿತ್ರಗಳನ್ನು ರಚಿಸಿಕೊಟ್ಟಿದ್ದಾರೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್ ಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು.

ಅನು: ಎಸ್. ಅನಂತನಾರಾಯಣ

16 other products in the same category:

Product added to compare.