ಕಾಯಾ ಕಾದಂಬರಿ ಬಗೆದು ತೋರಲು ಹೊರಟಿರುವುದು ಮನುಷ್ಯ ಬಾಳ್ಮೆಯಲ್ಲೇ ಬೆರೆತು ಹೋಗಿರುವ ಹಾಪಾಪಿತನವನ್ನು ಇಲ್ಲಿನ ಮಲೀಕ್,ಕಸ್ತೂರಿ,ಪರಿ,ಸಮಂತಾ,ಹನಿ,ಕನ್ನಡ ಭೂಮಿಕೆಗೆ ಹೊಸತಾಗಿ ನಡೆದು ಬಂದವರಾದರೂ ತಮಗೇ ಗೊತ್ತಿಲ್ಲದೇ ಕನ್ನಡತನದಲ್ಲಿ ಆಳವಾಗಿ ಬೇರೂರಿದವರು.

    ತಿರುವು ಮುರುವಾಗಿ ತೊಟ್ಟ ಬಟ್ಟೆಯ ಗುಂಟ ಹೊಲಿಗೆಯ ಪುಗ್ಗೆ ಕಾಣುವ ಹಾಗೆ ಇಲ್ಲಿನ ಪಾತ್ರಗಳ ದೇಹದ ಮೇಲೂ, ಮನೋವಲಯದ ಒಳಗೂ ಉಬ್ಬುತಗ್ಗುಗಳು ಮೂಡಿವೆ,ಮರೆಯಾಗಿವೆ. ಆ ನೇಯ್ಗೆ ಕಾಣದಂತೆ ಮಾಡಲು ನುರಿತ ಪ್ಲಾಸ್ಟಿಕ್ ಸರ್ಜನನಿದ್ದಾನೆ, ಪಳಗಿದ ರಾಜಕಾರಣಿಯಿದ್ದಾಳೆ.

  ಕಾದಂಬರಿಯುದ್ದಕ್ಕೂ ಹರಡಿಕೊಂಡಿರುವ ಲೀಸಾ ಸಾಲಿಂಜರ್ ಎಂಬ ವ್ಯಕ್ತಿ ನಮ್ಮಲ್ಲೇ ಯಾರೊಬ್ಬರೂ ಆಗಿರಬಹುದಾದ ಸಾಧ್ಯತೆಯೇ ಬೆಚ್ಚಿ ಬೀಳಿಸುವಂತಿದೆ. ನೀಳಬೆರಳ್ನಿಮಿರ್, ನಿಮ್ನಬೆರಳ್ಮಡಿಸ್ ಪದಗಳ ಅರ್ಥವನ್ನು ಈ ಕಥನ ಸಾಗರದಲ್ಲಿ ಧುಮುಕಿಯೇ ತಿಳಿಯಬೇಕು!

                                                                                                                                             -ಕಾವ್ಯಾ ಕಡಮೆ

ಗುರುಪ್ರಸಾದ ಕಾಗಿನೆಲೆ

16 other products in the same category:

Product added to compare.