"ವೆನಿಸ್ಸಿನಲ್ಲಿ ಸಾವು " ಗುಸ್ತಾವ್ ಆಶೆನ್ ಬಾಖ್ ಎಂಬ ಪ್ರಸಿದ್ದ ಲೇಖಕನೊಬ್ಬನಿಗೆ ಉಂಟಾಗುವ ಕೆಲವು ಅನುಭವಗಳನ್ನು ನಿರೂಪಿಸುವ ಕಾದಂಬರಿ. ಇಪ್ಪತ್ತನೆಯ ಶತಮಾನದ ಶ್ರೇಷ್ಠ ಕಾದಂಬರಿಕಾರರಲ್ಲಿ ಜೇಮ್ಸ್ ಜಾಯ್ಸ್ ಮತ್ತು ಮಾರ್ಸೆಲ್ ಪ್ರೂಸ್ತ್ ಜೊತೆ ಕೇಳಿಬರುವ ಇನ್ನೊಂದು ಹೆಸರು ಥಾಮಸ್ ಮಾನ್. ಈತ ಕಾದಂಬರಿಗೆ ಇತಿಹಾಸದ ಮತ್ತು ನಾಗರಿಕತೆಯ ವಿಶ್ಲೇಷಣೆಯನ್ನು ತಂದುಕೊಟ್ಟ. ವ್ಯಕ್ತಿಯ ಸುತ್ತ ಶತಶತಮಾನಗಳಿಂದ ಬೆಳೆದು ಬಂದಿರುವ ನಾಗರಿಕತೆಯ ಬಗೆಗೂ, ಸಂಸ್ಕೃತಿ ಮತ್ತು ವೈಚಾರಿಕ ಪರಂಪರೆಯ ಬಗೆಗೂ ವಿಶೇಷ ಒಲವಿದ್ದ ಅಸಾಧಾರಣ ಸಂವೇದನೆಯಿಂದ ಜೀವನವನ್ನು ಚಿತ್ರಿಸುತ್ತಲೇ ಅದಕ್ಕೊಂದು ವಿಮರ್ಶೆಯ ಎಳೆಯನ್ನು ಸೇರಿಸಿದ ಈತ 1929ರಲ್ಲಿ ತನ್ನ ಒಟ್ಟು ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಪ್ರತಿಭಾವಂತ."

ಎಸ್. ದಿವಾಕರ್

16 other products in the same category:

Product added to compare.