ಸಂಬಂಧ ಕಿಲುಬುಗಟ್ಟಲು ದೊಡ್ಡ ಕಾರಣವೇ ಬೇಕೆಂದೇನಿಲ್ಲ. ಹಿತ್ತಾಳೆಕಿವಿಯ ಪರಿಣಾಮ, ಮುಕ್ತ ಸಂವಹನದ ಕೊರತೆ, ತಪ್ಪು ತಿಳಿವಳಿಕೆ, ಪ್ರತಿಷ್ಠೆಯ ಫಲಶ್ರುತಿ, ಆತ್ಮೀಯವಾಗಿರಬೇಕಾದ ಸಂಬಂಧಗಳಲ್ಲಿ ಬಿರುಕು ಮೂಡಲು ಕಾರಣಗಳು ನೂರಾರು. ಪತಿ, ಪತ್ನಿಯರ ಸಂಬಂಧದ ನಡುವೆ ಕಿಲುಬುಗಟ್ಟಿದರೆ ಪರಿಣಾಮ ಏನಾದೀತು, ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದ್ದ ಸುಖಸಂಸಾರವೊಂದು ಹೇಗೆ ಕೈಯಾರೆ ನರಕ ಸೃಷ್ಟಿಸಿಕೊಂಡಿತು, ಹಿನ್ನೆಲೆಯ ಕಾರಣಗಳೇನು ಎನ್ನುವ ಕುರಿತು ಪ್ರಸ್ತುತ ಕಾದಂಬರಿಯಲ್ಲಿ ಚಿತ್ರಿಸಿದ್ದೇನೆ ಎಂದಿದ್ದಾರೆ ಲೇಖಕಿ ವಸುಮತಿ ಉಡುಪ

ವಸುಮತಿ ಉಡುಪ

16 other products in the same category:

Product added to compare.