ಇವರು ಅಮ್ಮನ ಬಗೆಗೆ ಹೇಳುತ್ತಲೇ ಫೆಮಿನಿಸಂನ ಪಾಠ ಹೇಳಬಲ್ಲರು, ತೇಜಸ್ವಿಯವರ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಲೇ ಅವರು ಯಾಕೋ ಅಂಥ ಗಟ್ಟಿ ಹೆಣ್ಣುಪಾತ್ರಗಳನ್ನು ಅಷ್ಟಾಗಿ ರಚಿಸಲಿಲ್ಲ ಎಂಬುದನ್ನೂ ನವಿರಾಗಿ ದಾಟಿಸಬಲ್ಲರು. ಸಂಧ್ಯಾರ ಬರಹಗಳು ಅವರ ಹಾಗೆಯೇ, ಭಾವ-ಬುದ್ದಿಗಳ ಹದ ಮಿಶ್ರಣ. ಭಾವ ಕೊಂಚ ಮುಂದೋ ಅನ್ನುವಷ್ಟರಲ್ಲಿ ವೈಚಾರಿಕ ಪ್ರಜ್ಞೆ ಸಿಹಿ ಕವಚದೊಳಗಿನ ಕಹಿಗುಳಿಗೆಯಂತೆ ಗ್ರಾಹ್ಯವಾಗಿಬಿಡುತ್ತದೆ. ಎರಡೂ ಜೊತೆಯಲ್ಲೇ ಇರುವಾಗ ಒಳಗಿಳಿಸಿಕೊಳ್ಳುವುದಕ್ಕೂ ಕಷ್ಟವೇನಲ್ಲ, ಆರೋಗ್ಯಕ್ಕಂತೂ ಬಲುಹಿತ.

ಸಂಧ್ಯಾರ ಬರಹಗಳು ನಿನ್ನೆ-ಇಂದುಗಳ ಚೆಂದದ ಹೆಣಿಗೆ. ಒಂದೆಡೆ ಸತ್ಯಜಿತ್ ರೇ ಅವರ ಸ್ತ್ರೀಪಾತ್ರಗಳ ಘನತೆಯನ್ನು ಮನದಟ್ಟು ಮಾಡಿಕೊಡುತ್ತಿರುತ್ತಾರೆ. ಇನ್ನೊಂದೆಡೆ ಪರ್ಫೆಕ್ಟ್ ಬಾಡಿಯ ಬೆನ್ನು ಬಿದ್ದಿರುವ ಇಂದಿನ ಹೆಂಗೂಸುಗಳ ಬಗ್ಗೆ ಬರೆಯುತ್ತಾ ಎಚ್ಚರಿಸುತ್ತಾರೆ.

ಇಲ್ಲಿನ ಬರಹಗಳಲ್ಲೊಂದು ತಾಯ್ತನವಿದೆ. ರಾಬಿನ್ಸ್ ವಿಲಿಯಮ್ಸ್ ಕಮಲ ಹಾಸನ್‌ರ ಡೌಟ್‌ಫೈರ್' ಪಾತ್ರಧಾರಿ, ಅವೈಷಣ್ಮುಖಿಯ ಪ್ರೇರಣೆ ಎಂದು ನಾವು ತಿಳಿದುಕೊಳ್ಳುವ ಹೊತ್ತಿಗೆ ಆತನ ಕಣ್ಣಿನಲ್ಲಿನ ಖಾಲಿತನ ಹಾಗೂ ದಟ್ಟ ನೋವುಗಳನ್ನು ನಮಗೂ ಕಾಣಿಸುತ್ತಾರೆ. ಒಂದು ಪುಸ್ತಕವನ್ನೋ, ಸಿನಿಮಾವನ್ನೋ ಓದುತ್ತ ಸಿಕ್ಕ ಹೊಳಹುಗಳನ್ನು ಹೇಳುವಲ್ಲಿ ಅವರಿಗವರೇ ಸಾಟಿ.

ಹಾದಿಯ ಇಲ್ಲಿ ಅವರದ್ದೇ ಆದ ಸ್ತ್ರೀವಾದದ ವ್ಯಾಖ್ಯಾನವಿದೆ. ಇಂದಿರಾ ಲಂಕೇಶರ ಆತ್ಮಕಥೆಯ ವಿಶ್ಲೇಷಣೆ, ಜಾನಕಿ ಸೀತೆಯಾಗುವ ವ್ಯಾಖ್ಯಾನದಂಥ ಸಂದರ್ಭದಲ್ಲೆಲ್ಲ ಅವರ ಸ್ತ್ರೀದನಿ ಹೆಣ್ಣಿನ ಆಸ್ಥಿತೆಯ ಮೂರ್ತರೂಪವಾಗಿ ಗಟ್ಟಿಯಾಗಿ ಕೇಳಿಬರುವ ಬಗೆ ಚೆಂದ.

ಸಂಧ್ಯಾ ಅವರೇ ಉಲ್ಲೇಖಿಸಿರುವ 'ಎಲ್ಲ ವಾದದ ಕೊನೆಗೆ ಅವರಿಸೊ ಮೌನದ ತರ್ಕ ಮೀರಿದ ಭಾವ ನಿನ್ನ ನೆನಪು' ಎಂಬ ಬಾಗೇಶ್ರೀ ಅವರ ಹಾಡಿನ ಸಾಲುಗಳಂತೆ ಎಲ್ಲ ತರ್ಕಗಳನ್ನೂ ಮೀರಿಸುವ ಭಾವವನ್ನು ಹಿಡಿಯುವ ಅವರ ಪ್ರಯತ್ನವೇ ಈ ಬರಹಗಳ ಆಪ್ತತೆಯ ಗುಟ್ಟು

                                                                                                                                                                                                 -ವಿದ್ಯಾರಶ್ಮಿ ಪೆಲತ್ತಡ್ಕ

ಎನ್ ಸಂಧ್ಯಾರಾಣಿ

16 other products in the same category:

Product added to compare.