ಬಿ.ಟಿ. ಲಲಿತಾನಾಯಕ್ / B.T. Lalithanayak
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :216
ISBN :
ಪುಸ್ತಕದ ಸಂಖ್ಯೆ : 16
Reference: ಗುರುರಾಜ ಕೊಡ್ಕಣಿ, ಯಲ್ಲಾಪುರ
ಗುರುರಾಜ ಕೊಡ್ಕಣಿ, ಯಲ್ಲಾಪುರ /Gururaaja kodkani, yallapura
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 265
ಪುಸ್ತಕದ ಸಂಖ್ಯೆ : 945
ISBN : 978-93-48262-22-6
Your payments are 100% secure
Delivery between 2-8 days
No returns accepted, Please refer our full policy
ತಾನೊಬ್ಬ ಆಗೋಸ್ಟಿಕ್
ಹಾಗೆಂದುಕೊಂಡ ಪರ್ವನ ಮನಸು ಗೊಂದಲದ ಗೂಡು. ಆಜ್ಞೇಯತಾವಾದಿ ಎನ್ನುತ್ತಾರಂತೆ ಕನ್ನಡದಲ್ಲಿ. ದೇವರಲ್ಲಿ ಅತಿಯಾಗಿ ವಿಶ್ವಾಸವಿರದ, ನಾಸ್ತಿಕತೆಯನ್ನೂ ಒಪ್ಪದ ಮನಸ್ಥಿತಿ ತನ್ನದು. ದೇವರು ಇರಲಿ, ಇರದಿರಲಿ ತನ್ನ ಬದುಕಿಗೆ ವ್ಯತ್ಯಾಸವೇನೂ ಆಗದು ಎನ್ನುವ ತರ್ಕ. ಅವನಿದ್ದರೆ ಅವನ ಪಾಡಿಗಿರಲಿ, ನಾನು ನನ್ನ ಪಾಡಿಗೆ ಎಂದುಕೊಂಡವನ ಬದುಕಲ್ಲಿ ಏನು ನಡೆಯುತ್ತಿದೆ ಎನ್ನುವುದು ಅರ್ಥವಾಗದ ಸ್ಥಿತಿ ಅವನಿಗೆ.
ಪರಮ ಆಸ್ತಿಕರಾದ ಹೆತ್ತವರು ತನ್ನ ತರ್ಕವನ್ನು ಅಲ್ಲಗಳೆಯುತ್ತಿದ್ದಾರೆ. ಗೆಳೆಯನಿಗೆ ವಿಷಯದ ಗಂಭೀರತೆಯನ್ನು ವಿವರಿಸುವುದು ಕಷ್ಟ. ಚಿಕ್ಕಪ್ಪನಿಗೆ ವಿವರಿಸಿ ಅರ್ಥ ಮಾಡಿಸೋಣ ವೆಂದರೆ ಅವನಿನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ. ಎಲ್ಲಕ್ಕಿಂತ ಅಚ್ಚರಿಯೆಂದರೆ ಸ್ಮಶಾನದಲ್ಲಿ ಕೊನೆಯವರೆಗೂ ತನ್ನ ಜೊತೆಗೇ ಇದ್ದ ಹೆಂಡತಿಗೆ ಏನೆಂದರೇ ಏನೂ ನೆನಪಿಲ್ಲ. ಆಕೆ ಕೂಡ ಲೋಕಿಯ ಸಾವು ಸಹಜ ಸಾವು ಎನ್ನುತ್ತಾಳೆ. ಅವನ ಸಾವಿಗೆ ಮಾನಸಿಕ ಕಾಯಿಲೆಯೇ ಕಾರಣ ಎಂದು ವಾದಿಸುತ್ತಾಳೆ.
ಊಹುಂ..!! ಖಂಡಿತ ಇಲ್ಲ, ಅದು ಸಹಜ ಸಾವಲ್ಲ. ಮೇಲ್ನೋಟಕ್ಕೆ ಸಹಜವೆನ್ನಿಸಿದರೂ ಅಲ್ಲೊಂದಿಷ್ಟು ಅನುಮಾನಗಳಿಗೆ ಅವಕಾಶವಿದೆ. ಅಲ್ಲೊಂದು ವಿಲಕ್ಷಣತೆಯಿದೆ. ಯಾರ ಗಮನಕ್ಕೂ ಬಾರದ. ಒಂದೇನೋ ಅವ್ಯಕ್ತ ಅಸಹಜತೆಯಿದೆ.
ಅದು ನಿಗೂಢ.!! ಅದು ವಿಕ್ಷಿಪ್ತ...!!
ಅದು ಮನುಷ್ಯ ಸಹಜವಾದ ಸಾವಲ್ಲ,
ಅದು ಅತಿಮಾನುಷ.....!!