"ಕೈಲಾಸಂ ಅವರು ಬರೆದ ಯಾವ ಗ್ರಂಥವನ್ನಾದರೂ ನಮ್ಮ ಜನ ಓದುತ್ತಿದ್ದಾರೆಂದರೆ ಜನರ ಮನಸ್ಸು ಆರೋಗ್ಯಸ್ಥಿತಿಯಲ್ಲಿದೆಯೆಂದು ನನಗೆ ದೃಢವಾಗುತ್ತದೆ. ಕೈಲಾಸಂ ಅವರ ಮುಖ್ಯ ಗುಣಗಳು - ಎರಡು. 1. ಹಾಸ್ಯ, 2. ಗಂಭೀರ. ಎರಡೂ ಮನಸ್ಸಿನ ಆರೋಗ್ಯದ ಲಕ್ಷಣಗಳು. ಹೀಗೆ ಉಭಯ ದೃಷ್ಟಿಗಳಿಂದಲೂ ಕೈಲಾಸಂ ಅವರ ನಾಟಕಗಳೂ, ಕಥೆಗಳೂ, ಸ್ನೇಹಸಂಭಾಷಣೆಗಳೂ ಉಲ್ಲಾಸಕಾರಿಯಾಗಿ, ಶೋಧನಕಾರಕವಾಗಿ ಗ್ರಾಹ್ಯಗಳಾಗಿರುತ್ತವೆ. ಗಂಭೀರ ವಿಚಾರ ಬೇಡವೆಂದರೂ, ಹಾಸ್ಯವು ಪ್ರಿಯವೆಂಬ ಕಾರಣದಿಂದಲಾದರೂ ನಮ್ಮ ಜನ ಕೈಲಾಸಂ ಅವರನ್ನು ಮೆಚ್ಚಿಕೊಂಡಿದ್ದಾರೆಂದು ನನಗೆ ಸಂತೋಷ".-ಡಿ.ವಿ.ಜಿ.

ಟಿ.ಪಿ. ಕೈಲಾಸಂ

16 other products in the same category:

Product added to compare.