ಪದ್ಮಾರಾಜ ದಂಡಾವತಿಯವರು ಬರೀ ಪತ್ರಕರ್ತರಲ್ಲ. ಅವರಲ್ಲಿ ಒಬ್ಬ ಸೃಜನಶೀಲ ಬರಹಗಾರನಿದ್ದಾನೆ, ಸಮರ್ಥ ಅನಿವಾದಕನಿದ್ದಾನೆ, ಹೊಸ ಹೊಸ ಪುಸ್ತಕಗಳನ್ನು ವಿಮರ್ಶಿಸುವ ಸಮೀಕ್ಷಕನಿದ್ದಾನೆ ಮತ್ತು ಸುತ್ತಲೂ ನಡೆಯುವ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅವುಗಳನ್ನು ಮನಸ್ಸು ಮುಟ್ಟುವ ಕಥನಗಳನ್ನಾಗಿಸುವ ಲೇಖಕನಿದ್ದಾನೆ. ಸಾಲದು ಎನ್ನುವಂತೆ ಸುಲಲಿತ ಶೈಲಿಯ ಲಲಿತ ಪ್ರಬಂಧಗಳನ್ನು ಬರೆಯುವ ಒಬ್ಬ ಪ್ರಬಂಧಕಾರನೂ ಅವರಲ್ಲಿ ಅವಿತುಕೊಂಡಿದ್ದಾನೆ. ಈ ಕೃತಿಯಲ್ಲಿ ಆ ಎಲ್ಲ ಲಕ್ಷಣಗಳು ಎದ್ದು ಕಾಣಿತ್ತವೆ. 

ಈ 'ಆತ್ಮಕಥನ'ದಲ್ಲಿ ಲೇಖಕ ಎಲ್ಲಿಯೂ ಸ್ವಯಂ ಸಂಭ್ರಮಿಸದೇ, ತನ್ನನ್ನೇ ತಾನು ಉಘೆ ಉಘೆ  ಮಾಡಿಕೊಳ್ಳದೇ ಇರುವುದರಿಂದ ಇದು ಶಾಂತವಾಗಿ ಹರಿಯುವ ಒಂದು ನದಿಯಂತೆ ಭಾಸವಾಗುತ್ತದೆ. ಅನೇಕರು ತಮ್ಮ ಆತ್ಮಕಥೆಗಳಲ್ಲಿ ತಮ್ಮನ್ನು ತಾವೇ ಇಂದ್ರ,ಚಂದ್ರ ಮತ್ತು ದೇವೇಂದ್ರ ಎಂದು ನಿರ್ಲಜ್ಜವಾಗಿ ಹೋಗಲಿಕೊಂಡುದ್ದನ್ನು ನಾವು ಕಂಡಿದ್ದೇವೆ. 

  'ಪ್ರಜಾವಾಣಿ'ಯಂಥ ದೊಡ್ಡ ಪತ್ರಿಕೆಯ ಸಂಪಾದಕನ ಖುರ್ಚಿಯಲ್ಲಿ ಕುಳಿತಿದ್ದ ದಂಡಾವತಿಯವರಿಗೆ ಸಂಭ್ರಮಿಸುವ, ಸೊಕ್ಕು ತೋರಿಸುವ ಅಥವಾ ಮದೋನ್ಮತ್ತರಾಗುವ ಅನೇಕ ಅವಕಾಶಗಳು ಒದಗಿ ಬಂದಿರಲು ಸಾಕು. ಆದರೆ, ಹಾಗೆ ಎಂದೂ ನಡೆದುಕೊಳ್ಳದೆ ವಿನೀತರಾಗಿ ಉಳಿದ ನನ್ನ ಗೆಳೆಯ ಪದ್ಮರಾಜ ದಂಡಾವತಿಯವರ ಈ ಕೃತಿ ಪ್ರಾಮಾಣಿಕ ಪತ್ರಕರ್ತನೊಬ್ಬನು ಸಮಾಜಕ್ಕೆ ಸಲ್ಲಿಸಿದ ಒಂದು ಅಫಿಡವಿಟ್ ನಂತಿದೆ. ಅದು ಈ ಕೃತಿಯ ಅನನ್ಯತೆಯಾಗಿದೆ. 

                                                                                                                                                                                  ಡಾ| ಸರಜೂ ಕಾಟ್ಕರ್ 

ಪದ್ಮರಾಜ ದಂಡಾವತಿ

16 other products in the same category:

Product added to compare.