ಪ್ರೊ. ಸಿ.ಎನ್. ರಾಮಚಂದ್ರನ್ ಕನ್ನಡದ ಪ್ರಮುಖ ಸಾಹಿತ್ಯ ವಿಮರ್ಶಕರು ಹಾಗೂ ಚಿಂತಕರು. ಅವರು ಕಾನೂನನ್ನು ಕೂಡಾ ಆಳವಾಗಿ ಅಭ್ಯಾಸ ಮಾಡಿದವರು. ಅದರ ಫಲವೇ ಈ ಕೃತಿ. ಈ ಕೃತಿ ಅನೇಕ ದೃಷ್ಟಿಯಿಂದ ಅನನ್ಯವಾಗಿದೆ. ಮೊದಲ ಬಾರಿ ಭಾರತದ ಎಲ್ಲ ಸಮುದಾಯಗಳ, ಜನಾಂಗಗಳ ಮಹಿಳೆ ಕುರಿತು ಈ ನೆಲದ ಕಾನೂನು ಹೇಗೆ ನಡೆದುಕೊಂಡಿದೆ ಎಂಬುದರ ಸಮಗ್ರ ಚಿತ್ರಣವನ್ನು ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಕಾನೂನು ಗಣಿತದ ಹಾಗೆ ಕಬ್ಬಿಣದ ಕಡಲೆ. ಆದರೆ, ಅರ್ಥ ಮಾಡಿಕೊಂಡರೆ ಅಷ್ಟೇ ಸ್ವಾರಸ್ಯಕರವೂ, ಆಸಕ್ತಿದಾಯಕವೂ ಆಗಿರುತ್ತದೆ. ಮಹಿಳೆಯ ಕುರಿತು ಇರುವ ಎಲ್ಲ ಕಾನೂನುಗಳನ್ನು ಇಲ್ಲಿ ಎಲ್ಲಿಯೂ ಕ್ಲಿಷ್ಟ ಎನಿಸದಂತೆ ವಿವರಿಸುವ ಲೇಖಕರು ಅವುಗಳಿಗೆ ಪೂರಕವಾದ ಟಿಪ್ಪಣಿಗಳನ್ನು ಮತ್ತು ಪ್ರಕರಣ(ಕೇಸ್)ಗಳನ್ನೂ ಉಲ್ಲೇಖಿಸಿದ್ದಾರೆ. ಅವರು ಇಲ್ಲಿ ಪ್ರಸ್ತಾಪಿಸಿರುವ ಪ್ರಕರಣಗಳು, ಮಹಿಳೆಯನ್ನು ಭಾರತದ ಕಾನೂನು ಹೇಗೆ ಸತಾಯಿಸಿದೆ, ಹೇಗೆ ಗೋಳು ಹೊಯ್ದುಕೊಂಡಿದೆ ಎಂಬುದರ, ಕಥನಗಳಾಗಿ ನಮಗೆ ಕಣ್ಣಿಗೆ ಕಟ್ಟುತ್ತವೆ, ಮನಸ್ಸಿಗೆ ತಾಕುತ್ತವೆ.

ಸಿ.ಎನ್. ರಾಮಚಂದ್ರನ್

16 other products in the same category:

Product added to compare.