ಮಿಹಿರಾಕುಲ ಕಥಾಸಂಕಲನ ವೈವಿಧ್ಯಮಯ ಕಥಾವಸ್ತುಗಳನ್ನು ಹೊಂದಿರುವ ಕೃತಿ. ಹೂಣರ ರಾಜನೊಬ್ಬ ಕಾಶ್ಮೀರದಲ್ಲಿ ಶಿವಾಲಯ ನಿರ್ಮಿಸಿದ ಕತೆ, ಟ್ರಾವರ್ನಿಯರ್ ಎಂಬ ಫ್ರೆಂಚ್ ಯಾತ್ರಿಕ ದಕ್ಷಿಣ ಭಾರತದಿಂದ ವಜ್ರವನ್ನು ಹೊತ್ತೊಯ್ದ ಕತೆ, ಅಕ್ಬರನನ್ನು ಅನಾರ್ಕಲಿ ಸಂದಿಗ್ಧತೆಗೆ ಸಿಲುಕಿಸಿದ ಕತೆ ಹೀಗೆ ಮೂರು ಕತೆಗಳು ಚರಿತ್ರೆಯ ವಿಭಿನ್ನ ಕಥಾವಸ್ತುವನ್ನು ಹೊಂದಿದ್ದರೆ, `ಆದಿನೆಲೆ' ಕತೆ ಚರ್ಚೆಗೊಳಗಾಗಬೇಕಾದ ಪ್ರಸ್ತುತ ಸನ್ನಿವೇಶವನ್ನು ಕುರಿತದ್ದು. ಎಂದಿನಂತೆ ಈ ಕತೆಗಳಲ್ಲಿ ಗಣೇಶಯ್ಯನವರ ವಿಶಿಷ್ಟ ಛಾಪಿದೆ. ಅವರ ಸಂಶೋಧನಾ ದೃಷ್ಟಿ, ಕುತೂಹಲಕರ ಶೈಲಿ, ಭರಪೂರ ಮಾಹಿತಿ ಎಲ್ಲವೂ ಸೇರಿದೆ.

ಡಾ. ಕೆ.ಎನ್. ಗಣೇಶಯ್ಯ

16 other products in the same category:

Product added to compare.