ಪೂರ್ಣಯ್ಯ ಮೈಸೂರು ಸಂಸ್ಥಾನದ ಮೊದಲ ದಿವಾನರು ಲೆಕ್ಕ ಬರೆಯುವ ತಮ್ಮ ಕೌಶಲ್ಯ,ಸ್ಮರಣ ಶಕ್ತಿ,ಬುದ್ದಿವಂತಿಕೆಗಳ ಮೂಲಕ ಹೈದರಾಲಿಯ ಗಮನಕ್ಕೆ ಬಂದು ಅವನ ಆಡಳಿತಾವಧಿಯಲ್ಲಿ ಮೊದಲು ಅರ್ಥ ಸಚಿವರಾಗಿ,ನಂತರ ದಿವಾನರಾಗಿ ಮೈಸೂರಿನ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ತಮ್ಮ ಅನನ್ಯವಾದ ಛಾಪು ಮೂಡಿಸಿದರು. ನಂತರ ಟಿಪ್ಪುಸುಲ್ತಾನ್, ಮುಮ್ಮಡಿ ಕೃಷ್ಣರಾಜ ಒಡೆಯರ್ಗೂ ದಿವಾನರಾದವರು.

                 ಒಟ್ಟೂ ನಲವತ್ತು ವರ್ಷ ಮೈಸೂರು ರಾಜ್ಯಕ್ಕೆ ಗಮನಾರ್ಹ ಸೇವೆಸಲ್ಲಿಸಿ,ಪೂರ್ಣಯ್ಯ ಆಧುನಿಕ ಮೈಸೂರು ನಿರ್ಮಾಪಕರಲ್ಲಿ ಒಬ್ಬರಾದರು. 'ಪುಣ್ಯ ಮಾಡಿದರೆ ಪೂರ್ಣಯ್ಯನಾಗುತ್ತಿ' ಎಂಬ ಮಾತು ಆ ಕಾಲದ ಜನರ ಬಾಯಲ್ಲಿತ್ತು. ಹೈದರ್ ಮತ್ತು ಟಿಪ್ಪು ಮಾತ್ರವಲ್ಲದೆ, ಪೂರ್ಣಯ್ಯನವರ ಕೆಲಸಕಾರ್ಯಗಳನ್ನು ಕಂಡ ಬ್ರಿಟಿಷ್ ಅಧಿಕಾರಿಗಳಾದ  ಮಾರ್ಕ್ ವೆಲ್ಲಸ್ಲಿ, ಕರ್ನಲ್ ಆರ್ಥರ್ ವೆಲ್ಲೆಸ್ಲಿ ಮತ್ತು ಬಾರಿ ಕ್ಲೋಸ್ ಮೊದಲಾದವರು ಅವರನ್ನು ವಿಶೇಷವಾಗಿ ಶ್ಲಾಘಿಸಿದ್ದಾರೆ. ಪೂರ್ಣಯ್ಯನವರ ಕುರಿತ ಈ ಪುಸ್ತಕ ಒಂದು ಪ್ರಮುಖ ಕೃತಿಯಾಗಿದೆ. 

                                                                                                                                 ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ.

ಎಂ. ಎನ್. ಸುಂದರರಾಜ್

16 other products in the same category:

Product added to compare.