"ಶರತ್ ಭಟ್ ಸೇರಾಜೆಯ ಬರಹಗಳನ್ನು ನಾನು ಮೊದಲು ಓದಿದ್ದು ಫೇಸ್ ಬುಕ್ ಪುಟಗಳಲ್ಲಿ. ಉದ್ದುದ್ದಕ್ಕೆ ಬರೆಯುತ್ತಿದ್ದ ಶರತ್ ಓದಿನ ರುಚಿ ಹುಟ್ಟಿಸುವಂತೆಯೂ ಬರೆಯುತ್ತಿದ್ದರು. ಅವರ ಆಸಕ್ತಿಯ ವಿಸ್ತಾರ, ಅಧ್ಯಯನದ ಆಳ, ಓದು, ಅದನ್ನು ಬರಹಕ್ಕಿಳಿಸುವ ವ್ಯವಧಾನ, ತರ್ಕಬದ್ಧತೆ ಮತ್ತು ಬಿಡುಬೀಸು ಶೈಲಿ ಬೆರೆತ ಗದ್ಯ ನನಗೆ ಇಷ್ಟವಾಯಿತೆಂದೇ ಹೇಳಬೇಕು. ಭಾಷೆಯ ಗಮ್ಮತ್ತು, ಅರ್ಥದ ಕಿಮ್ಮತ್ತು, ಪಾಸ್ ವರ್ಡಿನ ಮಹತ್ತು, ಬೇರೆ ಬೇರೆ ಪ್ರದೇಶಗಳಲ್ಲಿ ಆಡುವ ಮಾತಿಗಿರುವ ಗತ್ತು - ಹೀಗೆ ಶರತ್ ಲೇಖನಗಳಲ್ಲಿ ಏನುಂಟು ಏನಿಲ್ಲ".-ಜೋಗಿ "ಅಂಕಿತ ಪ್ರತಿಭೆ" ಮಾಲಿಕೆಯಲ್ಲಿ ಪ್ರಕಟವಾದ ವೈಚಾರಿಕ ಲಲಿತ ಪ್ರಬಂಧಗಳ ಸಂಕಲನವಿದು.

ಶರತ್ ಭಟ್ ಸೇರಾಜೆ

16 other products in the same category:

Product added to compare.