"ಶಿವನ ವಾದ್ಯ ಡಿಂಡಿಂ ಎನ್ನುತ್ತಿದ್ದದ್ದರಿಂದ ಅದು ಡಿಂಡಿಮ. ನಮ್ಮ ನಾಡಿನಲ್ಲಿ ನಡೆಯುವ ವಿದ್ಯಮಾನಗಳಲ್ಲಿ ಕೆಲವನ್ನು ಹೆಕ್ಕಿ ಅವಕ್ಕೆ ಪನ್ನಿನ ಭಾಷೆ ಇಕ್ಕಿ ಡುಂಡುಂ ಎಂದು ಬಾರಿಸಿದ್ದರಿಂದ ಡುಂಡಿರಾಜರದ್ದು ಡುಂಡಿಮ. ಡುಂಡಿರಾಜರ ಪೆನ್ನಿಗೆ ಮತ್ತು ಪನ್ನಿಗೆ ಸಿಲುಕದ ಸಂಗತಿಯಿಲ್ಲ. ಈ ಅಂಕಣ ಗಹನವಾದುದನ್ನು ಲಘುವಾಗಿಸಿದರೂ ಈ ಲಘುವಿನಲ್ಲಿಯೇ ಗುರುತರವಾದ ವಿಷಾದದ ಎಳೆ, ಸಂದೇಶದ ಸೆಲೆ ಸುಳಿದು ಹೋಗುತ್ತವೆ. ಪದ್ಯ ಗದ್ಯಗಳ ಮಿಶ್ರಣದ ಈ ಹೊಸ ಚಂಪು ಬರವಣಿಗೆ ವ್ಯಂಗ್ಯವಷ್ಟೇ ಅಲ್ಲದೆ ವಿಮರ್ಶೆಯೂ ಆಗಿ ಕಣ್ತೆರಸುತ್ತದೆ."-ಡಾ| ಸತ್ಯನಾರಾಯಣ ಮಲ್ಲಿಪಟ್ಟಣ.ದುಂಡಿರಾಜರ ನಗೆ ಬರಹಗಳ ಸಂಗ್ರಹ 

ಎಚ್. ಡುಂಡಿರಾಜ್

16 other products in the same category:

Product added to compare.