ಸ್ವಾತಂತ್ರ ಹೋರಾಟದಲ್ಲಿ ಅಂದಿನ ಯುವಕರ ತವಕ, ತಲ್ಲಣಗಳು, ಹೋರಾಟಗಳು, ಸಿದ್ಧಾಂತಗಳು ಹೇಗಿದ್ದವು ಎನ್ನುವುದು ಇಂದಿನ ಯುವ ಜನಾಂಗಕ್ಕೆ ಸ್ವಲ್ಪ ಪರಿಚಯವಾದರೂ ಆಗಬಹುದೇನೋ ಎನ್ನುವ ಒಂದು ಆಸೆ ಸ್ವಾತಂತ್ರ ಸಂದರ್ಭದ ಹಿನ್ನೆಲೆಯುಳ್ಳ ಈ ಕಾದಂಬರಿ ರಚನೆಗೆ ಕಾರಣವಾಗಿದೆ ಎಂದಿದ್ದಾರೆ ಲೇಖಕಿ. "ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕೊನೆಯ ದಶಕಗಳಿಂದ ಆರಂಭವಾಗಿ ಸ್ವಾತಂತ್ರ್ಯೋತ್ತರ ಅನಿವಾಸಿ ಭಾರತೀಯ ಯುವ ಪೀಳಿಗೆಯ ಬದುಕಿನವರೆಗೆ ಈ ಕಾದಂಬರಿ ವ್ಯಾಪಿಸಿಕೊಂಡಿದೆ. ಈ ಕೃತಿಯ ನಾಯಕ ಆಳುವ ಬ್ರಿಟಿಷರ ಮೇಲೆ ಗುಂಡು ಹಾರಿಸಿ ಸಾಯಿಸಿದ್ದರಿಂದ ಅಂಡಮಾನದ ಕರಿನೀರು ಶಿಕ್ಷೆ ಅನುಭವಿಸುತ್ತಾನೆ. ಈ ನಾಯಕ ಸ್ವತಃ ಲೇಖಕಿಯ ಕುಟುಂಬದ ಹಿರಿಯರೇ ಆಗಿರುವುದರಿಂದ, ನೈಜ ಕಥೆಯನ್ನು ಎಳೆತನದಿಂದ ಕೇಳುತ್ತ ಬೆಳೆದದ್ದನ್ನು ಲೇಖಕಿ ಹೇಳಿದ್ದಾರೆ. ಹೀಗಾಗಿ ಕಥೆಗೆ ಆಪ್ತಗುಣ ಒದಗಿಬಂದಿದೆ".

ಡಾ. ಲತಾ ಗುತ್ತಿ

16 other products in the same category:

Product added to compare.