• New product

''ಗೋಲಪ ಕಾಲೋನಿ ರಹಸ್ಯ" ಮೂಲತಃ "ಚಿರಿಯಾಖಾನಾ" (ಮೃಗಾಲಯ) ಎಂಬಹೆಸರಿನಲ್ಲಿ ಬರೆಯಲ್ಪಟ್ಟ ಬಂಗಾಳಿ ಕಾದಂಬರಿಯ ಕನ್ನಡ ಅನುವಾದಿತ ಕೃತಿ. ಈ ಕೃತಿಯ ಲೇಖಕರಾದ ಶರದೇಂದು ಬಂದೋಪಾಧ್ಯಾಯರು ಬಂಗಾಳಿ ಸಾಹಿತ್ಯದ ಮೇರು ಲೇಖಕರೊಬ್ಬರು (೧೮೯೯-೧೯೭೦). ಪ್ರಸಿದ್ಧ ಪತ್ತೇದಾರಿ ಪಾತ್ರ ವ್ಯೋಮಕೇಶ ಬಕ್ಷಿಯ ಸೃಷ್ಟಿಕರ್ತರು. ಗೋಲಪ ಕಾಲೋನಿ ಕತೆಯನ್ನು ವಿಮರ್ಶಕರು ಮನುಷ್ಯ ಸ್ವಭಾವದ ಸಂಕೀರ್ಣತೆಯನ್ನು ಚಿತ್ರಿಸುವ ಅತ್ಯುತ್ತಮ ಕಥನವೆಂಬುದಾಗಿ ಪರಿಗಣಿಸಿದ್ದಾರೆ. ತನ್ನ ಸಹವರ್ತಿ ಅಜಿತನೊಂದಿಗೆ ಸೇರಿ ವ್ಯೋಮಕೇಶ ಬಕ್ಷಿ, ಈ ಕಾಲೋನಿಯ ರಹಸ್ಯವನ್ನು ಹಂತ ಹಂತವಾಗಿ ಬಿಚ್ಚಿಡಲು ಪ್ರಯತ್ನಿಸುವ ರೋಚಕ, ನಿಗೂಢ ಕತೆ ಇಲ್ಲಿದೆ. ೧೯೬೭ ರಲ್ಲಿ ಈ ಕತೆಯನ್ನು ಆಧರಿಸಿ ಪ್ರಸಿದ್ಧ ಚಿತ್ರನಿರ್ದೇಶಕ ಸತ್ಯಜಿತ್ ರೇ ಸಿನಿಮಾ ತೆಗೆದು ಯಶಸ್ವಿಯಾದದ್ದು ಕೂಡ ಮುಖ್ಯ ಸಂಗತಿಯಾಗಿದೆ.

ಅನು: ಎಂ.ವಿ. ನಾಗರಾಜರಾವ್

16 other products in the same category:

Product added to compare.