• New product

'ಶ್ರೇಷ್ಠತೆಯ ಸೊಕ್ಕು' ಎಂಬ ನನ್ನ ಈ ಕೃತಿಯು ವಿವಿಧ ಸಂಧರ್ಭಗಳಲ್ಲಿ ನಾನು ಬರೆದ ಲೇಖನಗಳ ಸಂಕಲನ. ಇದೇ ಹೆಸರಿನ ಲೇಖನವೇ ಈ ಸಂಕಲನದಲ್ಲಿ ಮೊದಲನೆಯದು. ಶ್ರೇಷ್ಠತೆ ಎನ್ನುವುದು ಆದರ್ಶದ ಗುರಿಯತ್ತ ಸಾಗುವ ನಿರಂತರ ಶೋಧವೆಂದು ನಾನು ನಂಬಿದ್ದೇನೆ. ಹಾಗೆ ನೋಡಿದರೆ 'ಶ್ರೇಷ್ಠತೆ' ಎಂಬ ಹಂತವನ್ನು ನಿರ್ಧರಿಸುವ ಸಾಹಿತ್ಯಕ, ಸಾಂಸ್ಕೃತಿಕ ಮಾನದಂಡಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭವಲ್ಲ. ವಾಸ್ತವ ಹೀಗಿರುವಾಗ, ಶ್ರೇಷ್ಠತೆಯ ಹೆಸರಿನಲ್ಲಿ ಪ್ರತಿಭಾ ಭ್ರೂಣ ಹತ್ಯೆ ಮಾಡಬಾರದು. ಬರೆದರೆ ಶ್ರೇಷ್ಠವಾದದನ್ನೇ ಬರೆಯಬೇಕು ಎಂದು ಫರ್ಮಾನು ಹೊರಡಿಸುವುದು ಮತ್ತು ಅಂತಹ ಅಭಿಪ್ರಾಯ ಒತ್ತಡವನ್ನು ನಿರ್ಮಾಣ ಮಾಡುವುದರ ಜೊತೆಗೆ ತಮ್ಮ ಮನೋಧರ್ಮದ ಮಾನದಂಡಗಳೇ ಅಂತಿಮವೆಂದೂ ಉಳಿದದ್ದೆಲ್ಲ ಕನಿಷ್ಠವೆಂದೂ ಬೀಗುವುದು ಒಂದು 'ಸೊಕ್ಕು' ಎಂದು ನನ್ನ ಅನಿಸಿಕೆ. ಸೃಜನಶೀಲತೆಯು ಯಾವತ್ತೂ ಸೊಕ್ಕಾಗಬಾರದು. ಸೃಜನಶೀಲತೆಯನ್ನು ನಿರ್ಧರಿಸುವ ಮಾನದಂಡಗಳೂ ಅಹಮ್ಮಿಕೆಯ ಸೊಕ್ಕಿನಿಂದ ಕೂಡಿರಬಾರದು. ವಿಶೇಷವಾಗಿ ನಮ್ಮ ಶ್ರೇಣೀಕೃತ ಸಮಾಜದಲ್ಲಿ ಅಸಂಖ್ಯಾತರ ಅಕ್ಷರಾಭಿವ್ಯಕ್ತಿಯೇ ಅಸಾಧ್ಯವಾಗಿದ್ದ ಇತಿಹಾಸವಿತ್ತೆಂಬುದನ್ನು ಮರೆಯಬಾರದು.ಅಕ್ಷರ ವಂಚಿತ ಸಮುದಾಯಗಳಿಗೆ ಬರೆಯುವುದೇ ಒಂದು ಬಂಡಾಯ. ನಮ್ಮ ಸನ್ನಿವೇಶದಲ್ಲಿ 'ಶ್ರೇಷ್ಠತೆ'ಯ ಪರಿಕಲ್ಪನೆಗೆ ಸಾಂಸ್ಕೃತಿಕ ಆಯಾಮವಷ್ಟೇ ಅಲ್ಲದೆ, ಸಾಮಾಜಿಕ ಆಯಾಮವೂ ಇರುತ್ತದೆಯೆಂಬುದು ನನ್ನ ತಿಳುವಳಿಕೆ.

                                                                                                                                                                                              -ಲೇಖಕರು 

ಬರಗೂರು ರಾಮಚಂದ್ರಪ್ಪ

16 other products in the same category:

Product added to compare.