• New product

ಶ್ರೀಧರ ಬಳಗಾರರ ಕಾದಂಬರಿ 'ಬಲಿಪಾದ' ಸೃಷ್ಟಿಶೀಲ ಲೇಖಕನೊಬ್ಬ ಸ್ಥಳೀಯ ಜನಸಮುದಾಯದವರ ಜೀವನದ ಜತೆ ಆಳವಾಗಿಯೂ, ತೀವ್ರವಾಗಿಯೂ ತೊಡಗಿಕೊಂಡು ವಿಕಾಸವಾದ ಕೃತಿಯಾಗಿದೆ.ಹಲವು ವಿರೋಧಾಭಾಸಗಳ ಪದರುಗಳ ಸಮುದಾಯದ ಸಾವಯವ ಮತ್ತು ಸಂಕೀರ್ಣ ಯೋಜನೆಯನ್ನು ಇಲ್ಲಿ ಕಾರ್ಯಗತಗೊಳಿಸಲಾಗಿದೆ. ಭೂಮಿ,ಕಾಡು,ಪಕ್ಷಿ ಮತ್ತು ಪ್ರಾಣಿಗಳೊಂದಿಗೆ ಪವಿತ್ರ ಸಂಬಂಧವನ್ನು ಹೊಂದಿದ್ದ ಸ್ಥಳೀಯರ ದುರಂತ ಅಂತ್ಯದ ಕಥನವನ್ನು ನಿರೂಪಿಸಲು ಸಮುದಾಯದ ಕುರಿತು ಕಳಕಳಿ ಹೊಂದಿರುವ ಲೇಖಕನಿಂದ ಮಾತ್ರ ಸಾಧ್ಯ. ಕಾದಂಬರಿಯುದ್ದಕ್ಕೂ ಅನುಭವಕ್ಕೆ ಬರುವ ನಿರ್ಲಿಪ್ತ ಮತ್ತು ಸಂಯಮದ ನಿರೂಪಣೆ ಬದುಕಿನ ದುರಂತ ದರ್ಶನವನ್ನು ವಿನೂತನ ಗಾಂಭೀರ್ಯ ಮತ್ತು ಘನತೆಯ ಎತ್ತರಕ್ಕೆ ಒಯ್ದಿದೆ.

ಕಾದಂಬರಿಯನ್ನು ವಿಶಿಷ್ಟ ಭೌತಿಕ ಪ್ರದೇಶದಲ್ಲಿ ಸ್ಥಳೀಕರಿಸಿದ ಕಾರಣದಿಂದ ಮತ್ತು ಆ ಪ್ರದೇಶದ ಸತ್ವವನ್ನು ಅತ್ಯಂತ ಬಿಕ್ಕಟ್ಟಿನ ಕಾಲಘಟ್ಟದ ಜೀವನದಲ್ಲಿ ಆವಾಹನೆ ಮಾಡಿದ್ದರಿಂದ, ಅದು ಈವರೆಗೆ ನಿಜವಾದ ಕಾಳಜಿ ತೋರಿರದ ಸಾಂದ್ರವಾದ ಅಪರಿಚಿತ ಆಧುನಿಕ ಪ್ರಜ್ಞೆಯ ಬಹುಸ್ತರೀಯ ಬ್ರಹ್ಮಾಂಡದೊಳಗೆ ನಮ್ಮನ್ನು ಕರೆದೊಯ್ಯುತ್ತದೆ.ನಮಗೆ ಅನ್ಯವಾದ ಸಂಸ್ಕೃತಿ ಮತ್ತಿ ಸಮಾಜದ ಬಗ್ಗೆ ನಾವು ತೋರುತ್ತಿರುವ ಸ್ಪಂದನ ನಿರಾಸಕ್ತಿ ಹಾಗೂ ಸಿನಿಕತನದಿಂದ ಕೂಡಿದ ಕಾಲದಲ್ಲಿ ಅಪಾರ ಕಲ್ಪನಾಶಕ್ತಿಯ ಹೊರತಾಗಿಯೂ ಶ್ರೀಧರ ಬಳಗಾರರ ನೈತಿಕ ಸ್ಥೈರ್ಯ ಮತ್ತು ನಂಬಿಕೆ ಈ ಕೃತಿಯನ್ನು ಸೃಷ್ಟಿಸಿದೆ. ಕಾದಂಬರಿ ನಮ್ಮ ಸಾಂಸ್ಕೃತಿಕ ಸಂವೇದನೆಗೆ ಸವಾಲೊಡ್ಡುತ್ತದೆ ಮತ್ತು ಏಕತಾನತೆಯಿಂದ ಶಿಥಿಲವಾದ ನಮ್ಮ ಲೋಕವನ್ನು ಮುಖಾಮುಖಿಯಾಗುತ್ತ ಗತ ಮತ್ತು ವರ್ತಮಾನದ ನಮ್ಮ ತಿಳಿವಳಿಕೆಯನ್ನು ಮರುನಿರ್ದೇಶಿಸಲು ಒತ್ತಾಯಿಸುತ್ತದೆ.

                                                  ಎನ್. ಮನು ಚಕ್ರವರ್ತಿ 

ಶ್ರೀಧರ ಬಳಗಾರ

16 other products in the same category:

Product added to compare.