ಬರಗೂರು ರಾಮಚಂದ್ರಪ್ಪ / Baraguru Ramachandrappa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :172
ಪುಸ್ತಕದ ಸಂಖ್ಯೆ:76
ISBN:81-87321-81-X
Reference: ಡಾ. ಲತಾ ಗುತ್ತಿ
ಡಾ. ಲತಾ ಗುತ್ತಿ / Dr. Latha Gutthi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :472
ISBN :978-93-92230-91-2
ಪುಸ್ತಕದ ಸಂಖ್ಯೆ : 891
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಚದುರಂಗ ಕಾದಂಬರಿಯನ್ನು ಕುರಿತು ಡಾ| ಬಸವರಾಜ ಕಲ್ಗುಡಿ ಹಾಗೂ ಡಾ| ಎಸ್.ಪಿ. ಪದ್ಮಪ್ರಸಾದ್ ಹೀಗೆ ಹೇಳಿದ್ದಾರೆ.
ಪ್ರಸ್ತುತ ಲತಾಗುತ್ತಿಯವರ 'ಚದುರಂಗ' ಕಾದಂಬರಿಯು ಅವರ ಹೊಸ ಕೃತಿ. ಈ ಕಾದಂಬರಿಯು ಹಲವು ಕಾರಣಕ್ಕಾಗಿ ನನ್ನ ಗಮನವನ್ನು ಸೆಳಿದಿದೆ. ಅವರ ಕಾದಂಬರಿಗಳನ್ನು ಓದುವ ಓದುಗರಿಗೆ ಮಂದ್ರ ಸ್ತರದಲ್ಲಿ ಕಥೆ ಹೇಳುವ ಕಲೆಯು ಇವರಿಗೆ ಒಗ್ಗಿರುವುದು ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. ಅವರ ಹಿಂದಿನ ಕಾದಂಬರಿ 'ಕರಿನೀರು' ಕೃತಿಯಲ್ಲಿಯಂತೆ ಇಲ್ಲಿಯೂ ಅದು ಅವರ ನಿರೂಪಣೆಯ ಶೈಲಿಯಾಗಿದೆ. ಇದು ಅವರ ಶೈಲಿಯ ಒಂದು ಗುಣಾತ್ಮಕ ಅಂಶವೂ ಆಗಿದೆ. ಭಾರತದಲ್ಲಿ ಹಿಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತಂದ ಎಮರ್ಜೆನ್ಸಿಯ ಸಂದರ್ಭದ ಸರ್ವಾಧಿಕಾರತ್ವದ ಸ್ವರೂಪವನ್ನು ಹಿನ್ನೆಲೆಯಾಗಿಟ್ಟುಕೊಂಡು, ಉತ್ತರ ಕರ್ನಾಟಕದ ಬೆಳಗಾವಿ ಶಹರ ಮತ್ತು ತಾಲೂಕು ಹಳ್ಳಿಗಳಲ್ಲಿ ಅದು ಉಂಟುಮಾಡಿದ ಪ್ರಭಾವವನ್ನು ಚಿತ್ರಿಸುವುದು ಕಾದಂಬರಿಯ ಒಂದು ಮುಖ.ಈ ಹಿನ್ನೆಲೆಯಲ್ಲಿ ಎಲ್ಲ ಕಾಲದ ಸರ್ವಾಧಿಕಾರತ್ವಗಳು ಪ್ರಜೆಗಳ ಧ್ವನಿಯನ್ನು ಬಡ ಸಮುದಾಯದ ಅವಶ್ಯಕತೆಗಳನ್ನು ಹೇಗೆ ನಿರ್ನಾಮ ಮಾಡುತ್ತದೆ ಎನ್ನುವುದು ಇಲ್ಲಿಯ ನಿರೂಪಣೆಯ ಇನ್ನೊಂದು ಪ್ರಧಾನವಾದ ಅಂಶ .
ಡಾ| ಬಸವರಾಜ ಕಲ್ಗುಡಿ
ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ರಾಷ್ಟ್ರದ ರಾಜಕೀಯ ಚಟುವಟಿಕೆಗಳ ಜೊತೆಗೆ, ಗ್ರಾಮ-ನಗರಗಳ ಜೀವನ ಚಿತ್ರಣಗಳ ಆಗುಹೋಗುಗಳನ್ನು, ಕೆಲಮಟ್ಟಿಗೆ ವಿಶ್ವದ ಆಗುಹೋಗುಗಳನ್ನೂ ಓದುಗರೆದುರು ಸಮಾನಾಂತರವಾಗಿ ತೆರೆದಿಡುವ ಪ್ರಯತ್ನವನ್ನು ಈ ಕೃತಿಯಲ್ಲಿ ಲೇಖಕಿ ಮಾಡಿದ್ದಾರೆ. ಆದ್ದರಿಂದ ಏಕಾಕಾಲಕ್ಕೆ ಈ ಕೃತಿಯ ಮೂರುಸ್ತರದ ಆಗುಹೋಗುಗಳನ್ನು ಪರಸ್ಪರ ಪ್ರಭಾವಿಸುವ ಪರಿಯನ್ನು ಚಿತ್ರಿಸುವ ಮಹತ್ವಕಾಂಕ್ಷೆಯನ್ನು ಹೊಂದಿದೆ. ಬಹುಮಟ್ಟಿಗೆ ಅದರಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ ಕೂಡ.
ಡಾ| ಎಸ್.ಪಿ. ಪದ್ಮಪ್ರಸಾದ್