ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಬರವಣಿಗೆ ಆರಂಭಿಸಿದ ಬರಗೂರರು ಮೊದಲಿನಿಂದಲೂ ತಾವು ನಂಬಿದ್ದನ್ನು ಬರೆಯುತ್ತ ಬದುಕುತ್ತಾ ಬಂದಿದ್ದಾರೆ. ಕಥೆ, ಕಾದಂಬರಿ, ಕಾವ್ಯ, ನಾಟಕ, ಸಿನಿಮಾ, ರಾಜಕಾರಣ ಹೀಗೆ ವಿವಿಧ ಪ್ರಕಾರಗಳಿಗೆ ತಮ್ಮನ್ನು ಒಡ್ಡಿಕೊಂಡಿರುವ ಬರಗೂರರದು ಎಂದೂ ರಾಜಿಮಾಡಿಕೊಳ್ಳದ ಮನೋಭಾವ. ಮುಕ್ಕಾಗದ ಮಾನವೀಯತೆ ಮತ್ತು ಬತ್ತದ ಸೆಲೆಯಂಥ ಬಂಡಾಯದ ಗುಣ ಇವರ ಸೃಜನಶೀಲತೆಯ ಹಿಂದಿನ ನಿಯಂತ್ರಕ ಶಕ್ತಿ. ಕಾವ್ಯ ಅಥವಾ ಒಟ್ಟಾರೆ ಕಲೆಯ ಪ್ರಾಣಶಕ್ತಿ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಬೇಕೆಂಬುದೇ ಅವರ ಕಾವ್ಯದ ಪ್ರಧಾನ ಆಶಯ.

ಬರಗೂರು ರಾಮಚಂದ್ರಪ್ಪ

16 other products in the same category:

Product added to compare.