• New product

"ನಿನಗೆ ಗೊತ್ತಾ? ಮನುಷ್ಯನ ದೇಹವೊಂದೇ ಅಲ್ಲ,ಜೀವಜಗತ್ತಿನ ಎಲ್ಲಾ ದೇಹಗಳೂ ರಾಸಾಯನಿಕಗಳಿಂದ ರಚಿಸಲ್ಪಟ್ಟಿವೆ. ಈ ರಾಸಾಯನಿಕಗಳಿಗೆ ನೀತಿ,ನೈತಿಕತೆ,ಧರ್ಮ,ಕರ್ಮಗಳ ಸೋಂಕನ್ನು ಅಂಟಿಸಲು ಸಾಧ್ಯವಾ? ನಾನು ಕೆಮಿಸ್ಟ್ರಿ ಓದಿರುವುದರಿಂದ ಹೇಳಲು ಸಾಧ್ಯ ಆಗ್ತಾ ಇದೆ. ನಮ್ಮ ದೇಹ ಆಕ್ಸಿಜನ್.ಹೈಡ್ರೋಜನ್, ನೈಟ್ರೋಜನ್, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಸೋಡಿಯಂ, ಸಲ್ಫರ್, ಮೆಗ್ನೇಶಿಯಂ ರಾಸಾಯನಿಕಗಳಿಂದ ಮಾಡಿದ್ದಾಗಿದೆ. ಮೆದುಳು ಕೂಡಾ ನ್ಯೂರೊಟ್ರಾನ್ಸ್ ಮೀಟರ್ಸ್ ಮತ್ತು ಹಾರ್ಮೋನ್ ಗಳ ರಾಸಾಯನಿಕ ಕ್ರಿಯೆಯಿಂದಲೇ ರಚನೆಯಾಗಿರುವುದು. ಸ್ಪರ್ಶ,ನೋಟ,ಹಸಿವು,ಕಾಮ,ದ್ವೇಷ ಮುಂತಾದ ಎಲ್ಲಾ ನೈಸರ್ಗಿಕ ಪ್ರವೃತ್ತಿಗಳನ್ನು ನಿಯಂತ್ರಿಸುವುದು ಈ ರಾಸಾಯನಿಕಗಳೇ. ಸತ್ಯ-ಮಿಥ್ಯ, ನೈತಿಕತೆ-ಅನೈತಿಕತೆ, ವಾಸ್ತವ-ಭ್ರಮೆ, ಪ್ರೇಮ-ಕಾಮ ಈ ಎಲ್ಲವುಗಳ ನಡುವೆ ಇರುವುದು ಒಂದು ತೆಳ್ಳಗಿನ ಸಣ್ಣ ಗೆರೆಯಷ್ಟೆ. ಆದ್ದರಿಂದಲೇ ಪ್ರತಿಯೊಬ್ಬರೂ ಪರಿಮಿತಿಗಳನ್ನು ಮೀರಿ ಅವುಗಳಾಚೆಗಿನ ಸುಖಗಳನ್ನು ಸೂರೆಮಾಡಲು ಕಾತರರಾಗಿರುತ್ತಾರೆ. ಲೈಫ್ ಈಸ್ fragile , ಬಹಳ ಜಾಗರೂಕತೆಯಿಂದ ಹ್ಯಾಂಡ್ಲ್ ಮಾಡ್ಬೇಕು. ಸೈನ್ಸ್ ನಲ್ಲಿ ಪುನರ್ಜನ್ಮದ ಅಸ್ತಿತ್ವ ಇಲ್ಲವೇ ಇಲ್ಲ. ಹಾಗಾಗಿ ಬದುಕಿದಷ್ಟೂ ಕಾಲ ಅದನ್ನು ಸಡಗರ,ಸಂಭ್ರಮಗಳಿಂದ ಅನುಭವಿಸುತ್ತಾ ಹೋಗಬೇಕು ...".

                                                                                                                                                                                             -  ಪೂರ್ವಿಕಾ ದೇಶಪಾಂಡೆ 

ಕೇಶವರೆಡ್ಡಿ ಹಂದ್ರಾಳ

16 other products in the same category:

Product added to compare.