ಇತಿಹಾಸ ತೋರಿಸಿ ಕೊಟ್ಟ ವೈಜ್ಞಾನಿಕ ಸತ್ಯಗಳನ್ನು ನಾವು ಅಭ್ಯಸಿಸಿದರೆ `ಹೀಗೆ ಮಾಡಿದರೆ ಹೀಗೆ ಆಗುತ್ತದೆ' ಎಂಬ ಸಿದ್ಧಾಂತವನ್ನು ಮಾಡಿಕೊಳ್ಳಬಹುದು. ಇಂದು ಭಾರತದಲ್ಲಿ ಕಾಣಿಸಿಕೊಂಡಿರುವ ಮತ ಸಂಬಂಧಿ ವೈಷಮ್ಯವೇ ಇರಲಿ, ದಕ್ಷಿಣ ಆಫ್ರಿಕದ ವರ್ಣಭೇದವೇ ಇರಲಿ, ಎಲ್ಲಾ ತಪ್ಪು ಹೆಜ್ಜೆಗಳ ಪರಿಣಾಮಗಳೇ ಆಗಿವೆ. ಮತ್ತು ಇವು ಒಂದು ಐತಿಹಾಸಿಕ ನಿರ್ಣಯದ ಕಡೆಗೆ ಸಾಗುತ್ತಿರುತ್ತವೆ. ಇಂದು ವಿಶ್ವದಲ್ಲಿ ಕಾಣುತ್ತಿರುವ ಪರಿಹರಿಸಲಾಗದ ಸಮಸ್ಯೆಗಳಿಗೆ ಇತಿಹಾಸದ ವೈಜ್ಞಾನಿಕ ಸತ್ಯಗಳನ್ನು ಅರ್ಥಮಾಡಿಕೊಳ್ಳದಿರುವುದೇ ಕಾರಣವಾಗಿದೆ ಎನ್ನುವ ಕೆ.ಟಿ. ಗಟ್ಟಿರವರ ವಿಶಿಷ್ಟ ಕಾದಂಬರಿ ಇದು. ಇತಿಹಾಸದ ಮೊಗಸಾಲೆಯಲ್ಲಿ ಕುಳಿತು, ಸವಿಯಬಹುದು, ವಿಷವನ್ನು ಮತ್ತು ಅಮೃತವನ್ನು ಜೊತೆಜೊತೆಯಾಗಿ ಎಂದಿದ್ದಾರೆ ಲೇಖಕರು.

ಕೆ.ಟಿ. ಗಟ್ಟಿ

16 other products in the same category:

Product added to compare.