"ಅರ್ಧದಾರಿ ವೈಶಾಲಿಯ ನಡಿಗೆ. ಅದನ್ನು ವೈಶಾಲಿಯ ಒಳಗೆ ಇಳಿದು ಕಂಡವರು ಸತ್ಯಕಾಮರು. ಬದುಕು ವಿಶಾಲವಾದರೆ ಎಷ್ಟು ನಿರ್ಭೀತ, ಸ್ವತಂತ್ರ ಎನ್ನುವುದಕ್ಕೆ ವೈಶಾಲಿಯ ಬದುಕು ಸಾಕ್ಷಿ. ಇಲ್ಲಿ ವೈಶಾಲಿ ಕೇವಲ ಹೆಣ್ಣಲ್ಲ; ಗಂಡೂ ಅಲ್ಲ. ಅವಳಿಗೆ ಯಾವುದರ ಭಯವೂ ಇಲ್ಲ. ನಿರ್ಭೀತಿ ಎಂದರೆ ಭಯದ ಮೂಲ ತಿಳಿಯುವುದು. ಭಯ ಇಲ್ಲವಾಗುವುದಲ್ಲ. ಸ್ವಾತಂತ್ರ ಎಂದರೆ ಮುಕ್ತವಾಗುವುದಲ್ಲ. ಪರಮ ಬಂಧನಕ್ಕೆ ಅರ್ಪಿಸಿಕೊಳ್ಳುವುದು. ಸರ್ವಾರ್ಪಣೆ ವೈಶಾಲಿಯ ಶಕ್ತಿ. ಆದರೂ ಇದಕ್ಕಿಂತ ದಾರಿ ಮುಂದೆ ಇದೆ. ಆದ್ದರಿಂದಲೇ ಸತ್ಯಕಾಮರ ಕಣ್ಣಿಗೆ ವೈಶಾಲಿಯದು ಇನ್ನೂ ಅರ್ಧ ದಾರಿ..." ಸತ್ಯಕಾಮರ ಅನುಭವ ಕಥನದಂತೆ ಇರುವ ಈ ಕಾದಂಬರಿ ಅತ್ಯಂತ ಕುತೂಹಲ ಹುಟ್ಟಿಸುವಂತದ್ದು.

ಸತ್ಯಕಾಮ

16 other products in the same category:

Product added to compare.