ಇದೊಂದು ಅಪರೂಪದ ಮನೋವೈದ್ಯನ ಭಾವಪೂರ್ಣ ಕಥನ.ತನ್ನ ಜೀವನದ ಮುಖ್ಯ ಹಂತದಲ್ಲಿ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿ ತನ್ನ ಕುಟುಂಬದ ಸಮಸ್ತರನ್ನು ಕಳೆದುಕೊಂಡು 'ಪ್ರೇಮಸ ಹಂಬಲವೇ ಮನುಷ್ಯನ ಅಂತಿಮ ಗುರಿ' ಎಂಬ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಬದುಕಿನ ಸಂತನ ಕಥೆ. ನಾಜಿ ಯಾತನಾ ಶಿಬಿರಗಳಲ್ಲಿ ಸ್ವತಃ ತಾನೇ ಸಂಕಟ, ನೋವು ದುಮ್ಮಾನಗಳನ್ನು ಅನುಭವಿಸುತ್ತಾ ತನ್ನ ವೃತ್ತಿಧರ್ಮದಿಂದ ಕಿಂಚಿತ್ತೂ ವಿಮುಖನಾಗದೆ ಮನುಷ್ಯ ಪ್ರೀತಿಯ ತೀವ್ರತೆ ಸಾವಿನಷ್ಟೇ ಬಲವಾದದ್ದೆಂದು ನಂಬಿದ್ದ ಹಾಗೂ ತನ್ನ ಬದುಕಿನ ಮೂಲಕ ಜಗತ್ತಿಗೆ ತೋರಿಸಿದ ವೈದ್ಯನೊಬ್ಬನ ರೋಚಕ ಕಥೆ. 

ಈ ಕಥನದಲ್ಲಿ ಮನುಷ್ಯನ ವರ್ತನೆಯಲ್ಲಿರುವ ಕ್ರೌರ್ಯ, ಹಿಂಸಾವಿನೋದ, ಔದಾರ್ಯ,ಅಸಾಯಕತೆ ಈ ಎಲ್ಲ ಆಯಾಮಗಳನ್ನು ಶ್ರೀ ಮುರಳೀಧರನ್ ಸರಳವಾಗಿ ಅನಾವರಣಗೊಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮನೋವಿಜ್ಞಾನವನ್ನು ಸ್ನಾತಕೋತ್ತರ ಮಟ್ಟದಲ್ಲಿ ಅಧ್ಯಯನ ಮಾಡಿದ/ಮಾಡುತ್ತಿರುವ ವಿದ್ಯಾರ್ಥಿಗಳು ಕೂಡ ಫ್ರಾಂಕಲ್ ನನ್ನ ಈ ಪರಿಯಲ್ಲಿ ಅಧ್ಯಯನ ಮಾಡಿರುವುದು ನನ್ನ ಗಮನಕ್ಕಂತೂ ಇಲ್ಲಿಯವರೆಗೆ ಬಂದಿಲ್ಲ.

 ತನ್ನ ಸರ್ವಸ್ವವನ್ನು ಕಳೆದುಕೊಂಡು ಒಂದು ಯಾತನಾ ಶಿಬಿರದಿಂದ ಮತ್ತೊಂದಕ್ಕೆ ವರ್ಗಾವಣೆಯಾಗುತ್ತ ನಿರಂತರ ಕ್ಷೋಭೆ,ಸಂಕಟ,ಹಸಿವುಗಳನ್ನು ಅನುಭವಿಸುತ್ತಾ, ತನ್ನ ಮನಸ್ಸಿನಲ್ಲಿ ಸ್ವಲ್ಪವೂ ಕಹಿ ತುಂಬಿಕೊಳ್ಳದೆ ಬದುಕಿನ ಅರ್ಥದ ಶೋಧನೆಗೆ ತೊಡಗಿಸಿಕೊಂಡ ಮಹಾಚಿಂತಕನ ವೀರಗಾಥೆ ಇದು ಎಂದರೂ ಅತಿಶಯೋಕ್ತಿಯಲ್ಲ.

ವೈ.ಜಿ. ಮುರಳೀಧರನ್

16 other products in the same category:

Product added to compare.