• New product

ಆಸ್ತಿಕತೆ ಮತ್ತು ನಾಸ್ತಿಕತೆಗಳ ವಾಡದಾಚೆಗೆ ಇನ್ನೂ ಒಂದು ವಾದವಿದೆ. ದೇವರು,ದೆವ್ವಗಳು ಇರಲಿ ಇರದಿರಲಿ ಅದರಿಂದ ನಮ್ಮ ಬದುಕಿಗೇನೂ ವ್ಯತ್ಯಾಸವಾಗದು ಎನ್ನುವ ಧಾಟಿಯ ವಾದಕ್ಕೆ ಅಜ್ಞೇಯತಾವಾದ ಎನ್ನುವ ಹೆಸರು.ಹಾಗೆ ಅಜ್ಞೇಯತಾವಾಗಿರುವ ನನಗೆ ದೇವರು ದೆವ್ವ ಎರಡು ತುಂಬಾ ಇಂಟರೆಸ್ಟಿಂಗ್ ಎನ್ನಿಸುವ ವಿಷಯಗಳೇ.ಆತ್ಮವಿದೆ,ಪ್ರೇತವಿದೆ ಎನ್ನುವುದು ನಂಬುವವರ ನಂಬಿಕೆ. ದೆವ್ವ ಭೂತಗಲಿ ಖಂಡಿತವಾಗಿಯೂ ಇಲ್ಲ ಎನ್ನುತ್ತದೆ ವಿಜ್ಞಾನ. ದೆವ್ವ ಭೂತಗಳು ಇರದೇ ಇರಬಹುದು ಆದರೆ ಸುತ್ತಮುತ್ತಲ ಜನರೆಲ್ಲಾ ವಿಕಾರವಾಗಿ ದೆವ್ವಗಳಂತೆ ಕಾಣುವ ಮಾನಸಿಕ ಕಾಯಿಲೆಗೆ 'ಪ್ರೊಸೊಪೊಮೆಟಮೊರ್ಫೋಪ್ಸಿಯಾ' ಎನ್ನುತ್ತದೆ ಮನೋವಿಜ್ಞಾನ. ಮನುಷ್ಯರೇ ದೆವ್ವದಂತೆ ಕಾಣುವ ವಿಲಕ್ಷಣ ಕಾಯಿಲೆ ಇರಬಹುದಾದರೆ ಮಾನಸಿಕ ಲೋಕದಲ್ಲಿ ಇರಬಹುದಾದ ಇನ್ನಷ್ಟು ವಿಚಿತ್ರ ಕಾಯಿಲೆಗಳ್ಯಾವವು ಎಂದು ಹುಡುಕುತ್ತ ಹೊರಟರೆ ಸಿಕ್ಕ ಅನೂಹ್ಯ ಕಾಯಿಲೆಗಳಿಗೆ ಲಿಕ್ಕವಿಲ್ಲ. 

'ಅರೆರೆ..!! ಹೀಗೂ ಕಾಯಿಲೆ ಇದೆಯೇ ...?' ಎಂದು ಹುಬ್ಬೇರಿಸುವ ಅಂತಹ ಕೆಲವು ವಿಕ್ಷಿಪ್ತ ರೋಗಗಳನ್ನಾಯ್ದುಕೊಂಡು ಅದಕೊಂದಿಷ್ಟು ಹಾರರ್ ಒಗ್ಗರಣೆ ಕೊಟ್ಟು ಬರೆದ ರೋಚಕ ಕತೆಗಳ ಕಥಾಸಂಕಲನವಿದು.

ಗುರುರಾಜ ಕೊಡ್ಕಣಿ, ಯಲ್ಲಾಪುರ

16 other products in the same category:

Product added to compare.