• New product

ಭಾರತದ ಷರ್ಲಾಕ್ ಹೋಮ್ಸ್ ಎಂದೇ ಖ್ಯಾತರಾಗಿರುವ ವ್ಯೋಮಕೇಶ ಬಕ್ಷಿ ಕನ್ನಡಕ್ಕೆ ಅಪರಿಚಿತರು. ಹಿಂದಿಯಲ್ಲಿ ಇವರ ಸಾಹಸಗಳನ್ನು ಕುರಿತ ಧಾರವಾಹಿ ಸಾಕಷ್ಟು ಪ್ರಸಿದ್ಧವಾಗಿದೆ. ಈಗ ವ್ಯೋಮಕೇಶ ಬಕ್ಷಿ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಮೈ ನವಿರೇಳಿಸುವ, ಓದುಗರನ್ನು ತುದಿಗಾಲ ಮೇಲೆ ನಿಲ್ಲಿಸುವ ಈ ಪತ್ತೇದಾರಿ ಕಥೆಗಳು ಕನ್ನಡದ್ದೇ ಎಂಬಂತೆ ಓದಿಸಿಕೊಳ್ಳುತ್ತವೆ.

ಅತ್ಯಂತ ಅಪಾಯಕಾರಿ ಮತ್ತು ದಂಗಾಗಿಸುವ ಪ್ರಕರಣವನ್ನು ತನ್ನ ಚತುರತೆ ಮತ್ತು ಅಸಾಧಾರಣ ಬುದ್ಧಿವಂತಿಕೆಯಿಂದ ಕೊನೆ ಮುಟ್ಟಿಸುವಲ್ಲಿ ಈತ ಕುಶಲಿ. ಈ ವ್ಯೋಮಕೇಶ ಬಕ್ಷಿ, ಕೊನೆವರೆಗೂ ಅಪರಾಧಿ ಯಾರು ಎಂದು ತಿಳಿಯದಂತೆ ಓದುಗರನ್ನು ಕುತೂಹಲದ ಪರಾಕಾಷ್ಠೆಗೆ ತಲುಪಿಸುತ್ತಾರೆ. 

ಬಕ್ಷಿ ಬಗೆಹರಿಸಿದ ಇಂತಹ ನಿಗೂಢ, ರಹಸ್ಯ ಮತ್ತು ರೋಮಾಂಚಕಾರಿ ಕಥೆಗಳು ಇಲ್ಲಿವೆ.

ಅನು: ಎಂ.ವಿ. ನಾಗರಾಜರಾವ್

16 other products in the same category:

Product added to compare.