"ತನ್ನ ಕಾಲದ ಅಪ್ರಿಯ ಸತ್ಯಗಳಿಗೆ ಎದುರಾಗುವುದೇ ತನ್ನ ಸಮುದಾಯದ ಸೌಷ್ಟವವನ್ನು ಕಾಯುವ ಬಗೆ ಎಂದು ಗಾಢವಾಗಿ ನಂಬಿರುವ ವ್ಯಕ್ತಿ ಅನಂತಮೂರ್ತಿ. ಆದ್ದರಿಂದಲೇ ವ್ಯಕ್ತಿ ಪ್ರಜ್ಞೆಯಲ್ಲಿ ಆರಂಭವಾದ ಇವರ ಹುಡುಕಾಟ ಮನುಷ್ಯ ಸಂಕಟದ ಆದಿಮ ನೆಲೆಯನ್ನು ಮುಟ್ಟಿರುವಂತೆ ಕಾಣಿಸುತ್ತದೆ. ಇವರ ಸಾಹಿತ್ಯಿಕ ಬರೆವಣಿಗೆ, ಸಾರ್ವಜನಿಕ ಭಾಷಣಗಳು, ರಾಜಕೀಯ ನಿಲುವುಗಳು, ಸಾಂಸ್ಕೃತಿಕ ವಾಗ್ವಾದಗಳು, ಗಣಿಗಾರಿಕೆ ವಿರೋಧಿ, ಪರಿಸರ ಹೋರಾಟ, ಸಾಮಾನ್ಯ ಶಾಲೆಯ ಹಂಬಲ ಈ ಎಲ್ಲವನ್ನೂ ಅಖಂಡವಾಗಿಯೇ ನೋಡಬೇಕು. ಈ ಎಲ್ಲವೂ ಅವರಿಗೆ ಸಮಾನ ಮಹತ್ವದ, ಜೀವನ್ಮರಣದ ಪ್ರಶ್ನೆಗಳಾಗಿ ಕಾಣಿಸುತ್ತವೆ."-ಎಂ.ಎಸ್. ಆಶಾದೇವಿ ಯು.ಆರ್. ಅನಂತಮೂರ್ತಿಯವರ ಅಪೂರ್ವ ಚಿಂತನೆಗಳ ಸಂಕಲನವಿದು.

ಸಂ:ಎನ್.ಎ.ಎಂ. ಇಸ್ಮಾಯಿಲ್

16 other products in the same category:

Product added to compare.