ವಸುಮತಿ ಉಡುಪ / Vasumathi Udupa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :200
ISBN : 978-93-92230-63-9
ಪುಸ್ತಕದ ಸಂಖ್ಯೆ : 878
Reference: ಜಯಂತ ಕಾಯ್ಕಿಣಿ
ಜಯಂತ ಕಾಯ್ಕಿಣಿ / jayanth Kaikini
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 176
ಪುಸ್ತಕದ ಸಂಖ್ಯೆ : 805
ISBN :978-81-951131-7-0
Your payments are 100% secure
Delivery between 2-8 days
No returns accepted, Please refer our full policy
ಜಯಂತಕಾಯ್ಕಿಣಿಯವರ ಕಥಾಸಂಕಲನವನ್ನು ಕುರಿತು ಕನ್ನಡದ ಪ್ರಸಿದ್ದ ವಿಮರ್ಶಕರಾದ ಡಾ. ಸಿ.ಎನ್. ರಾಮಚಂದ್ರನ್‌ರವರು ಹಾಗೂ ಕವಿ ಮತ್ತು ಕಥೆಗಾರ್ತಿ ಡಾ|ಗೀತಾವಸಂತ ರವರು ಹೀಗೆ ಹೇಳಿದ್ದಾರೆ.
"ಜಯಂತರ ಗದ್ಯ ಇಬ್ಬರು ಸಂವೇದನಾಶೀಲ ಗೆಳೆಯರ ನಡುವಿನ ದಿನನಿತ್ಯದ ಮಾತುಕತೆಯಂತೆ ನೇರ, ಸರಳ ಹಾಗೂ ಭಾವಪೂರ್ಣ. ಈ ಬರಹಗಳು ನಾವು ಸಾಮಾನ್ಯವೆಂದು ಭಾವಿಸುವ ಘಟನೆ-ವಿಚಾರಗಳ ಅಸಾಮಾನ್ಯತೆಯನ್ನೂ ಮತ್ತು ನಾವು ಕ್ಲಿಷ್ಟ ಹಾಗೂ ಅಸಾಮಾನ್ಯ ಎಂದು ಭಾವಿಸುವ ಸಂಗತಿಗಳ ಆಳದಲ್ಲಿರುವ ಸಾಮಾನ್ಯ ಅಂಶಗಳನ್ನೂ ಗುರುತಿಸಿ,ನಾವೂ ಅವುಗಳನ್ನು ಗುರುತಿಸುವಂತೆ ಪ್ರಚೋದಿಸುತ್ತವೆ."
-ಡಾ. ಸಿ.ಎನ್. ರಾಮಚಂದ್ರನ್.
" ಅತ್ಯಂತ ಸೃಜನಶೀಲ ಮನಸ್ಸು ಮಾತ್ರ ಸದಾ ಪರಿವರ್ತನಶೀಲ ಜಗತ್ತಿನ ಚಲನೆಯನ್ನು ಸೆರೆಹಿಡಿಯಬಲ್ಲದು. ಆ ಚಲನೆಯೊಳಗಿನ ಕಂಪನವನ್ನು ಕಾಣಬಲ್ಲದು. ಜಯಂತರ ಕಥೆಗಳ ಸಂವೇದನೆ ಜಡಜಗತ್ತನ್ನು ಭೇದಿಸಿ ಅದರೊಳಗಿನ ಜೀವತಂತುಗಳನ್ನು ಮೀಟುವುದು ಸುಳ್ಳಲ್ಲ .ಆದ್ದರಿಂದಲೇ ಅವರನ್ನು ಓದುವುದೆಂದರೆ ವಿಶಿಷ್ಟವಾದ ಸೆಳೆತ. ಚಲನಶೀಲತೆಗೆ ಯಾವತ್ತಿಗೂ ಸಿದ್ಧಚೌಕಟ್ಟುಗಳೆಂದರೆ ಅಲರ್ಜಿ. ಜಯಂತರದು ಅಂಥ ಚಲನಶೀಲ ಹಾಗೂ ಸೃಜನಶೀಲ ದರ್ಶನ. ಅವರ ಕಥೆಗಳು ಲೋಕವನ್ನು ಗ್ರಹಿಸುವ ಹೊಸಕ್ರಮವೊಂದನ್ನು ಕಾಣಿಸುವಷ್ಟು ಸಶಕ್ತ. ಇದನ್ನೇ ನಾವು ಮೀಮಾಂಸೆ ಎನ್ನಬಹುದು. ಆದರೆ, ಇದು ಸಿದ್ಧಗೊಂಡಿರುವ ಮೀಮಾಂಸೆಯಲ್ಲ. 'ಆಗುತ್ತಲಿರುವ'ಮೀಮಾಂಸೆ. ಕಟ್ಟುವುದಕ್ಕಿಂತ ಆಗುವುದು ಅವರ ಕಥೆಗಳಿಗೆ ಬಹುಮುಖ್ಯ ರಚನೆಯಾಗುವುದೆಲ್ಲ ಮರುಕ್ಷಣಕ್ಕೆ ನಿರಚನಗೊಳ್ಳುವ, ಬದುಕಿನ ಕ್ಷಣಭಂಗುರತೆಯನ್ನು ಅರಿಯುವ ದಾರಿಗಳನ್ನು ಅವರ ಕಥೆಗಳು ಸದ್ದಿಲ್ಲದೇ ನಿರ್ಮಿಸುತ್ತವೆ. ಸಿದ್ಧಾಂತಗಳಲ್ಲಿ ಜಡಗೊಂಡ ಮನಸ್ಥಿತಿಯನ್ನು ಕೊಡವಿನೋಡಿದರೆ ಮಾತ್ರ ಜಯಂತರ ಬರವಣಿಗೆಯಲ್ಲಿನ ದರ್ಶನವು ಗೋಚರಿಸುತ್ತದೆ."
-ಡಾ|ಗೀತಾವಸಂತ.